!-- PAGE TITLE -->

ಭೇಟಿ - Visits

This section provides the List of visits and the respective details

ಭೇಟಿ - All Visits
02.11.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಖರೀದಿ ಮತ್ತು ಸದೃಢಗೊಳಿಸುವ ಬಗ್ಗೆ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ವಿವಿಧ ಇಲಾಖಾ ಅಧಿಕಾರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳು, ಮುಂತಾದವರು ಭಾಗವಹಿಸಿದ್ದರು.

31.10.2018 ರಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯವರು ಏರ್ಪಡಿಸಿದ್ದ ರಾಜ್ಯ ಮಟ್ಟದ ರೈತರು ಮತ್ತು ಕೃಷಿ ಕಾರ್ಮಿಕರ ಸಮಾವೇಶ ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

25.10.2018 ಮತ್ತು 26.10.2018 ರಂದು ನವ ದೆಹಲಿಯ India International Centerನಲ್ಲಿ ಏರ್ಪಡಿಸಿದ್ದ "Food Systems Dialofues" ಎಂಬ ಎರಡು ದಿನಗಳ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಭಾಗವಹಿಸಿದ್ದರು.

23.10.2018 ರಂದು ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆಯವರು " Agriculure and Pricing of Agri-Products -Challenges and Issues" ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಭಾಗವಹಿಸಿದ್ದರು.

11.10.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು Department of Agriculture Co-Operation and Welfare ಇಲಾಖೆಯ ಅಧಿಕಾರಿಗಳೊಂದಿಗೆ Food and Public Distribution System Regarding Procurement of Maize ಬಗ್ಗೆ ಚರ್ಚಿಸಿದರು.

10.10.2018 ರಂದು Dr.Ashok Dalwai, CEO, National Rainfed Area Authority ರವರ ನೇತೃತ್ವದಲ್ಲಿ ನವ ದೆಹಲಿಯಲ್ಲಿ ಏರ್ಪಡಿಸಿದ್ದ Discuss Price and Demand Forecasting ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಭಾಗವಹಿಸಿದ್ದರು.

29.09.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಕಲಬುರಗಿಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲೆಯ ಈ ಸಾಲಿನ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನಾ ಪರಿಸ್ಥಿತಿ ಹಾಗು ಧಾರಣೆ ಮತ್ತು ಖರೀದಿ ಸಿದ್ದತೆ ಬಗ್ಗೆ ವಿವಿಧ ಇಲಾಖಾಧಿಕಾರಿಗಳು, ಮತ್ತಿತರರೊಡನೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

28.09.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯವರು ಏರ್ಪಡಿಸಿದ್ದ ವಿವಿಧ ಕೃಷಿ ಉತ್ಪನ್ನಗಳ ಖರೀದಿ ಸಮಸ್ಯೆಯ ಬಗೆಗಿನ ಚರ್ಚಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

26.08.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶ್ರೀ. ಪ್ರತಾಪ್ ಹೆಗ್ಗಡೆ ರವರ "ಅವನಿ ಆರ್ಕೆಡ್ ಸಾವಯವ ತೋಟದಲ್ಲಿ" ಇಸ್ರೇಲ್ ದೇಶದ ರಾಯಭಾರಿಯಾದ ಶ್ರೀಮತಿ. ದಾನ್ ಕರ್ಶ್ ರವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

25.08.2018 ರಂದು ಅಪರಾಹ್ನ ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ "ಕೃಷಿ ಅಭಿವೃದ್ಧಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಕಾರ್ಯ ಚಟುವಟಿಕೆಗಳ ಪರಿಶೀಲನಾ" ಸಭೆಯಲ್ಲಿ ಮಾನ್ಯ ಕೃಷಿ ಸಚಿವರು, ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

25.08.2018 ರಂದು ಪೂರ್ವಾಹ್ನ ಮಾನ್ಯ ಕೃಷಿ ಸಚಿವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ "ಕೃಷಿ ಅಭಿವೃದ್ಧಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಕಾರ್ಯ ಚಟುವಟಿಕೆಗಳ ಪರಿಶೀಲನಾ" ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

18.08.2018 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ಕೇರಳ ರಾಜ್ಯದ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ರಾಜಶೇಖರನ್ ರವರು ಭೇಟಿ ನೀಡಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರೊಂದಿಗೆ ಆಯೋಗದ ಬಗ್ಗೆ ಚರ್ಚಿಸಿದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

18.08.2018 ರಂದು ಪೂರ್ವಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು Your Story and AWS ಸಂಸ್ಥೆಯವರು ಏರ್ಪಡಿಸಿದ್ದ Panelist for our-Invitation Agritech Meetup ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

12.08.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ತುಮಕೂರು ಜಿಲ್ಲೆಯ ರೈತ ಮುಖಂಡರಾದ ಶ್ರೀ. ರವೀಶ್ ರವರ ಶ್ರೀ. ಭೈರವೇಶ್ವರ ಸಹಜ ಬೇಸಾಯ ತೋಟ ಹೊನ್ನಡಕೆ ಇಲ್ಲಿ ಏರ್ಪಡಿಸಿದ್ದ " ಬುತ್ತಿಕಟ್ಟು" ಎಂಬ ವಿನೂತನ ಸಹಜ ಬೇಸಾಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

30.07.2018 ರಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ರವರು ಅಪರಾನ್ನ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಡಕೆ ಮತ್ತು ಭತ್ತ, ಮುಂತಾದ ಜಿಲ್ಲೆಯ ಪ್ರಮುಖ ಬೆಳೆಗಳ ಧಾರಣೆ, ಮಾರುಕಟ್ಟೆ ಪರಿಸ್ಥಿತಿಗಳ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು.

30.07.2018 ರಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ರವರು ಪೂರ್ವಾಹ್ನ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ "Farmers Loan Waive and Problems of Agriculture Sector" ಎಂಬ ವಿಷಯದ ಬಗ್ಗೆ ನಡೆದ ಸೆಮಿನಾರ್ ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

27.07.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗಕ್ಕೆ ಮಹಾರಾಷ್ಟ್ರ ರಾಜ್ಯದ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ. ಪಾಶಾ ಪಾಟೀಲ್ ರವರು ಭೇಟಿ ನೀಡಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರೊಂದಿಗೆ ಆಯೋಗದ ಬಗ್ಗೆ ಚರ್ಚಿಸಿದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

26.07.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ, ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕ, ಯು.ಎ.ಎಸ್, ಬೆಂಗಳೂರು ಹಾಗು ಯು.ಎ.ಎಸ್. ಅಲ್ಯೂಮ್ನಿ ಅಸೋಸಿಯೇಶನ್ ಗಳ ಸಹಯೋಗದಲ್ಲಿ ಏರ್ಪಡಿಸಿದ್ದ "ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಸದೃಢ ಮಾರುಕಟ್ಟೆ - ಕೇಂದ್ರದ ನೂತನ ಯೋಜನೆಗಳ ಸಮಗ್ರ ವಿಶ್ಲೇಷಣೆ" ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ.ಎನ್‌. ಹೆಚ್. ಶಿವಶಂಕರ್ ರೆಡ್ಡಿ, ಮಾನ್ಯ ತೋಟಗಾರಿಕೆ ಸಚಿವರಾದ ಶ್ರೀ.ಎಂ.ಸಿ. ಮನಗೂಳಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾದ ಶ್ರೀ. ವೆಂಕಟರಾವ ನಾಡಗೌಡ, ಮಾನ್ಯ ಸಹಕಾರ ಸಚಿವರಾದ ಶ್ರೀ. ಬಂಡೆಪ್ಪ ಕಾಶಂಪುರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮತ್ತು ಶ್ರೀ. ಅಶೋಕ್ ದಳವಾಯಿ, ಭಾ.ಆ.ಸೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, NRAA, ನವದೆಹಲಿ, ಭಾರತ ಸರ್ಕಾರ, ಶ್ರೀ. ಸಂಜೀವ್ ಕುಮಾರ್ ಛಡ್ಢಾ, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, NAFED, ನವದೆಹಲಿ, ಡಾ. ಅರ್ಜುನ್ ಸಿಂಗ್ ಸೈನಿ, ತೋಟಗಾರಿಕಾ ಮಹಾ ನಿರ್ದೇಶಕರು, ಹರಿಯಾಣ ಸರ್ಕಾರ, ಶ್ರೀ. ಪಾಶಾ ಪಟೇಲ್, ಅಧ್ಯಕ್ಷರು, ಕೃಷಿ ಬೆಲೆ ಆಯೋಗ, ಮಹಾರಾಷ್ಟ್ರ ಸರ್ಕಾರದವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಾನ್ಯ ಕೃಷಿ ಸಚಿವರು ವಹಿಸಿದ್ದರು, ಪ್ರಾಸ್ತಿವಿಕ ನುಡಿಯನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ ರವರು ನುಡಿದರು ಮತ್ತು ಸ್ವಾಗತ ಭಾಷಣವನ್ನು ಶ್ರೀ. ಮಹೇಶ್ವರ ರಾವ್, ಭಾ.ಆ.ಸೇ., ಕಾರ್ಯದರ್ಶಿಗಳು, ಕೃಷಿ ಇಲಾಖೆ, ಬೆಂಗಳೂರು ರವರು ಸ್ವಾಗತಿಸಿದರು. ಈ ಕಾರ್ಯಾಗಾರದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಕೃಷಿ ಆಯುಕ್ತರು, ಕೃಷಿ ನಿರ್ದೇಶಕರು, ವಿವಿಧ ಇಲಾಖಾ ಅಧಿಕಾರಿಗಳು, ತಜ್ಞರು, ರೈತ ಪ್ರತಿನಿಧಿಗಳು, ಪ್ರಗತಿಪರ ರೈತರು, ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

18.06.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಹರಿಯಾಣ ರಾಜ್ಯದ ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ತೋಟಗಾರಿಕಾ ಮಹಾ ನಿರ್ದೇಶಕರಾದ ಡಾ. ಅರ್ಜುನ್ ಸಿಂಗ್ ಸೈನಿ ಮತ್ತು ಹರಿಯಾಣದ ಕಿಸಾನ್ ಆಯೋಗದ ಅಧ್ಯಕ್ಷರಾದ ಡಾ. ರಮೇಶ್ ಯಾದವ ಅವರೊಂದಿಗೆ “Price Stabilization and deficiency Payments for Horticultural Programmes” ಎಂಬ ವಿಷಯಗಳ ಬಗ್ಗೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

16.06.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿಯವರು ಪಂಜಾಬಿನ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ "The 3rd International Dialogue” ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, “Measuring the Economics of food and Agricultural Ecosystems” ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿದರು.

08.06.2018 ಮತ್ತು 09.06.2018 ರಂದು ಕೃಷಿ ವಿಜ್ಞಾನ ಕೇಂದ್ರ ಹಿರಿಯೂರಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಕೃಷಿ ಬೆಲೆ ಆಯೋಗ ಪ್ರಾಯೋಜಿತ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಯೋಜನೆಯ ಕಾರ್ಯ ಪ್ರಗತಿಯ ಬಗ್ಗೆ ನಡೆದ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿಯವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಆಯ್ದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು, ಸಂಶೋಧನಾ ಸಹಾಯಕರು, ಕ್ಷೇತ್ರ ಸಹಾಯಕರು ಮತ್ತು ರೈತರು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

05.06.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿಯವರು, ರಾಮನಗರ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ಮಾವು ಬೆಳೆಯ ಬೆಲೆ ಕುಸಿತದ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷರು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು, ತಜ್ಞರು ಮತ್ತು ರೈತ ಪ್ರತಿನಿಧಿಗಳು ಭಾಗವಹಿಸಿದ್ದರು. ನಂತರ ಅಧ್ಯಕ್ಷರು ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾವು ಬೆಳೆ ಬೆಲೆಯ ಬಗ್ಗೆ ವ್ಯಾಪಾರಸ್ಥರು ಮತ್ತು ರೈತರೊಂದಿಗೆ ಸಭೆಯನ್ನು ನಡೆಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

24.05.2018 ರಿಂದ 26.05.2018 ರವರೆಗೆ ಮೇಘಾಲಯದ ಶಿಲ್ಲಾಂಗ್ ನ Indian Council of Agriculture Research ಸಂಸ್ಥೆಯಲ್ಲಿ ಏರ್ಪಡಿಸಿದ್ದ AIMS, Annual Convention and MINI SC Partners ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಯವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

22.05.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಯವರು, ಹೈದರಬಾದಿನ Indian Institute of Millet Research ಸಂಸ್ಥೆಯಲ್ಲಿ ಏರ್ಪಡಿಸಿದ್ದ ಸಿರಿ ಧಾನ್ಯ ಮೇಳ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

18.05.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಯವರು, ನವ ದೆಹಲಿಯ Indian Institute of Research Center ಗೆ ಭೇಟಿ ನೀಡಿ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು.

17.05.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಯವರು, ನವ ದೆಹಲಿಯ Congress Socialist Party ಯ 84th Anniversary ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, Agriculture related issues ಎಂಬ ವಿಷಯದ ಬಗ್ಗೆ ಪ್ರಬಂಧವನ್ನು ಮಂಡಿಸಿದರು.

20.03.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಯವರು, ಮಹರಾಷ್ಟ್ರದ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಜೊತೆ ಸಭೆ ಮತ್ತು ಮುಂಬೈನ ಎ.ಪಿ.ಎಂ.ಸಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

19.03.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ಯವರು, ಮಹರಾಷ್ಟ್ರದ ರಾಹುರಿ ಜಿಲ್ಲೆಯ ಮಹಾತ್ಮ ಪುಲೆ ಕೃಷಿ ವಿದ್ಯಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಯಲ್ಲಿ ನೇಮಕಾತಿಯ ಮುಖ್ಯಸ್ಥರಾಗಿ ಭಾಗವಹಿಸಿದ್ದರು.

06.03.2018 ಮತ್ತು 07.03.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಪ್ರಾಯೋಜಿತ ಹಾಗೂ ಪೀಪಲ್ ಟ್ರೀ (ಮಿಂಚುಳ ಆಶ್ರಮ) "ಸುಸ್ಥಿರ ಸಿರಿಧಾನ್ಯ ಕೃಷಿಯಿಂದ ಸ್ಥಿರ ಆದಾಯ" ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಶ್ರೀ.ಸತೀಶ್ ಜಿ, ಕೃಷಿ ಆಯುಕ್ತರು, ಶ್ರೀ.ಬಿ,ವೈ.ಶ್ರೀನಿವಾಸ್, ಕೃಷಿ ನಿರ್ದೇಶಕರು, ಡಾ. ಎ.ಸೀತಾರಾಂ, ಹಿರಿಯ ಸಿರಿಧಾನ್ಯ ವಿಜ್ಞಾನಿ, ಡಾ. ಪ್ರಭಾಕರ್, ಯೋಜನಾ ಸಂಯೋಜಕರು, ಕೃ.ವಿ.ವಿ. ಬೆಂಗಳೂರು, ಶ್ರೀ. ಮನೊಜ್ ಮೆನನ್, ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀಜ಼ಯಸ್ವಾಮಿ, ಜಂಟಿ ಕೃಷಿ ನಿರ್ದೇಶಕರು, ಬೆಂಗಳೂರು, ಶ್ರೀಮತಿ. ಅನಸೂಯಮ್ಮ, ಉಪಾಧ್ಯಕ್ಷರು, ಕರ್ನಾಟಕ ರೈತ ಸಂಘ ಮತ್ತು ಆಯ್ದ ಕೃಷಿ ವಿಜ್ಞಾನ ಕೇಂದ್ರಗಳ ಸಿಬ್ಬಂದಿಗಳು ಮತ್ತು ರೈತರು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

02.03.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಏರ್ಪಡಿಸಿದ್ದ "ರೈತರ ಆದಾಯ ಮತ್ತು ಕಲ್ಯಾಣ ವೃದ್ಢಿ"ಗೆ ಅಗತ್ಯವಾದ ನೈರ್ಮಲ್ಯ, ಮೂಲಭೂತ ಸೌಕರ್ಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಾಯಿತು. ಈ ಕಾರ್ಯಾಗಾರದಲ್ಲಿ ಶ್ರೀ.ಬಿ.ಆರ್. ಪಾಟೀಲ್, ಶಾಸಕರು, ಡಾ.ಎಸ್.ಎ. ಪಾಟೀಲ್, ಮಾಜಿ ಉಪ ಕುಲಪತಿಗಳು, ಡಾ. ಹೆಚ್.ಎಮ್. ಮಹೇಶ್ವರಯ್ಯ, ಉಪ ಕುಲಪತಿಗಳು, ಕ.ಕೇ.ವಿ.ವಿ.ಕಲಬುರಗಿ, ಡಾ.ಎಸ್.ಕೆ. ಮೇಟಿ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ. ರಾಯಚೂರು, ಮತ್ತು ಆಯ್ದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಸಿಬ್ಬಂದಿಗಳು ಮತ್ತು ರೈತರು ಭಾಗವಹಿಸಿದ್ದರು.

02.03.2018 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಪ್ರಾಯೋಜಿತ ಕಾರ್ಯಯೋಜನೆಯ ಗ್ರಾಮವಾದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ತೆಲ್ಲೂರು ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಲಾಯಿತು. ಈ ಸಭೆಯಲ್ಲಿ ಶ್ರೀ.ಬಿ.ಆರ್. ಪಾಟೀಲ್, ಶಾಸಕರು, ಡಾ.ಎಸ್.ಎ. ಪಾಟೀಲ್, ಮಾಜಿ ಉಪ ಕುಲಪತಿಗಳು, ಡಾ. ಹೆಚ್.ಎಮ್. ಮಹೇಶ್ವರಯ್ಯ, ಉಪ ಕುಲಪತಿಗಳು, ಕ.ಕೇ.ವಿ.ವಿ.ಕಲಬುರಗಿ, ಡಾ.ಎಸ್.ಕೆ. ಮೇಟಿ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ. ರಾಯಚೂರು, ಮತ್ತು ಆಯ್ದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಸಿಬ್ಬಂದಿಗಳು ಮತ್ತು ರೈತರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

28.02.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮೈಸೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ "ಕೃಷಿ ಮಾರುಕಟ್ಟೆ" ವಿಚಾರದಲ್ಲಿ ಪ್ರಬಂಧವನ್ನು ಮಂಡಿಸಿದರು ನಂತರ ಅಪರಾಹ್ನ ಮೈಸೂರು ಮಹಾರಾಜ ಸಂಸ್ಥೆಯವರ ಸಹಯೋಗದಲ್ಲಿ ಮೈಸೂರು ಮತ್ತು ಪಾಂಡವಪುರ ತಾಲ್ಲೂಕುಗಳ ಹಳ್ಳಿಯಲ್ಲಿ ಕೈಗೊಂಡ "ನಿಖರ ಬೇಸಾಯ ಕೃಷಿ ಪದ್ಧತಿ"ಯ ಪ್ರಗತಿ ಪರಿಶೀಲನೆಯನ್ನು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

19.02.2018 ಮತ್ತು 20.02.2018 ರಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ "ವಿವಿಧ ಬೆಳೆಗಳ ವಸ್ತುಸ್ಥಿತಿ ವರದಿಯ" ಬಿಡುಗಡೆ ಮತ್ತು "ಆನ್ ಲೈನ್" ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕಗಳ ಕಳೆದ ಸಾಲಿನ ಪ್ರಗತಿ ಪರಿಶೀಲನೆಯ ಬಗ್ಗೆ ಚರ್ಚಿಸಲಾಯಿತು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

13.02.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ಕರ್ನಾಟಕ ಕೃಷಿ ಬೆಲೆ ಆಯೋಗದ ಪ್ರಾಯೋಜಿತ ಕಾರ್ಯಯೋಜನೆಯ ಗ್ರಾಮವಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶಿಡ್ಲಯ್ಯನಕೋಟೆ ಗ್ರಾಮಕ್ಕೆ ಭೇಟಿ ನೀಡಿ, ನವಣೆ ಉತ್ಪಾದನೆ ಮತ್ತು ಮಾರಾಟಕ್ಕೆ ರೈತ ಉತ್ಪಾದಕರ ಸಂಘ ರಚಿಸುವ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

01.02.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕೃಷಿ ಇಲಾಖೆ, ಹಾಸನ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ ಸಕಲೇಶಪುರದಲ್ಲಿ ಏರ್ಪಡಿಸಿದ್ದ "ಕೃಷಿ ಮತ್ತು ತೋಟಗಾರಿಕೆ ಬೆಳೆಗಳ" ಮಾರುಕಟ್ಟೆ ಸದೃಡಗೊಳಿಸುವ ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಈ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು, ತಜ್ಞರು ಮುಂತಾದವರು ಭಾಗವಹಿಸಿದ್ದರು.

31.01.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದರೆಗುಡ್ಡೆ ಗ್ರಾಮದಲ್ಲಿ ಏರ್ಪಡಿಸಿದ್ದ "ರಾಜ್ಯದ ರೈತರ ಕರಾವಳಿ ಸಮ್ಮಿಲನ" ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ.ಕೆ. ಅಭಯಚಂದ್ರ ಜೈನ್, ಶಾಸಕರು, ಮೂಡುಬಿದಿರೆ, ಡಾ.ಎಲ್.ಸಿ.ಸೋನ್ಸ್, ಬಾಶಲ್ ಮಿಶ್ ಫಾರ್ಮ್, ಡಾ.ಎಂ. ಮೋಹನ್ ಅಳ್ವ, ಅಧ್ಯಕ್ಷರು, ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆ, ಡಾ.ಎಲ್‌ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು, ಎಸ್.ಕೆ ಡಿ.ಆರ್.ಡಿ.ಪಿ, ಶ್ರೀ. ಎಸ್.ಎಂ. ಶಿವಪ್ರಕಾಶ್, ವಿಸ್ತರಣಾ ನಿರ್ದೇಶಕರು,ಕ.ಪ.ಪ. ಮಿ.ವಿ.ವಿ, "ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿಯ" ಆಯ್ದ ಎಂಟು ಹಳ್ಳಿಗಳ ರೈತರು, ಆಯ್ದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಹಾಗೂ ಸಹುದ್ಯೋಗಿಗಳು ಭಾಗವಹಿಸಿದ್ದರು.

29.01.2018 ಮತ್ತು 30.01.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯ, ಮಣಿಪಾಲರವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಎರಡು ದಿನಗಳ "ರೈತರ ವ್ಯಕ್ತಿತ್ವ ವಿಕಸನ ಶಿಬಿರ" ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ, ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಮೋದ್ ಮಧ್ವರಾಜ್, ಮೀನುಗಾರಿಕೆ, ಕ್ರೀಡೆ ಹಾಗೂ ಯುವ ಸೇವಾ ಸಚಿವರು, ಕರ್ನಾಟಕ ಸರ್ಕಾರ, ಡಾ. ಹೆಚ್. ವಿನೋದ್ ಭಟ್, ಉಪ ಕುಲಪತಿಗಳು, ಕೆ.ಎಂ.ಸಿ. ಮಣಿಪಾಲ, ಡಾ. ಪೂರ್ಣಿಮಾ ಬಾಳಿಗಾ, ಸಹ ಉಪ ಕುಲಪತಿಗಳು, ಕೆ.ಎಂ.ಸಿ. ಮಣಿಪಾಲ, ಡಾ. ಪ್ರಜ್ಞಾ ರಾವ್, ಪ್ರಾಂಶುಪಾಲರು, ಕೆ.ಎಂ.ಸಿ. ಮಣಿಪಾಲ ಮತ್ತು "ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿಯ " ಆಯ್ದ ಎಂಟು ಹಳ್ಳಿಗಳ ರೈತರು, ಆಯ್ದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಹಾಗೂ ಸಹದ್ಯೋಗಿಗಳು ಭಾಗವಹಿಸಿದ್ದರು.

28.01.2018 ರಂದು ಉಡುಪಿ ಜಿಲ್ಲಾ ಕೃಷಿಕ ಸಂಘದವರು ಏರ್ಪಡಿಸಿದ್ದ "ಕೃಷಿ ಮಾಹಿತಿ ಶಿಬಿರ ಮತ್ತು ವಸ್ತು ಪ್ರರ್ದಶನ" ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ, ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

27.01.2018 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸ್ವಾಮಿ ವಿವೇಕಾನಂದ ಕೃಷಿಕರ ಬಳಗ, ಬೇಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಹಾಗೂ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ " ಕೃಷಿ ಬೆಳೆಗಳ ಬೆಲೆ ನಿಯಂತ್ರಣ ಮಾಹಿತಿ ಶಿಬಿರ" ದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ, ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

11.01.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ವಹಿವಾಟಿನ ಮೇಲೆ "ಬಹು ಮೌಲ್ಯದ ನೋಟಿನ ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಗಳ" ಪ್ರಭಾವದ ಕುರಿತು ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕೃಷಿ ಆಯುಕ್ತರು, ಕೃಷಿ ನಿರ್ದೇಶಕರು, ಶ್ರೀ. ಹನುಮನಗೌಡ ಬೆಳಗುರ್ಕಿ, ಸದಸ್ಯರು, ಕೃಷಿ ಬೆಲೆ ಆಯೋಗ, ಜಂಟಿ ನಿರ್ದೇಶಕರು, ರೇಷ್ಮೆ ನಿರ್ದೇಶನಾಲಯ, ಶ್ರೀ. ವೆಂಕಟರಮಣ ಹೆಗ್ಗಡೆ, ಕೇಂದ್ರ ತೆರಿಗೆ ಇಲಾಖೆ, ಬೆಂಗಳೂರು, ಎ.ಪಿ.ಎಂ.ಸಿ. ಕಾರ್ಯದರ್ಶಿಗಳು, ಕೆ.ಟಿ. ಗಂಗಾಧರ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಪ್ರಗತಿ ಪರ ರೈತರು, ತಜ್ಞರು, ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

06.01.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ಧಾರವಾಡ ಕೃಷಿ ವಿಶ್ವವಿದ್ಯಾಲಕ್ಕೆ ಆಯೋಗದ ಅನುದಾನ ಸಮೇತ ನೀಡಿರುವ ಯೋಜನೆಗಳ ಬಗ್ಗೆ ಸಂಶೋಧನಾ ನಿರ್ದೇಶಕರು, ವಿಸ್ತರಣಾ ನಿರ್ದೇಶಕರು, ಸಂಬಂಧಿಸಿದ ಘಟಕಗಳ ಮುಖ್ಯಸ್ಥರು, ತಜ್ಞರು ಮತ್ತು ರೈತರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

05.01.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ, ಕೃಷಿ ಬೆಲೆ ಆಯೋಗದ ಪ್ರಾಯೋಗಿಕ ಕಾರ್ಯ ಯೋಜನೆಯಾದ "ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ" ಪ್ರಗತಿಯ ಬಗ್ಗೆ ಹಳ್ಳಿಯ ರೈತರು, ತಜ್ಞರು ಮತ್ತು ಇಲಾಖಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ನಂತರ ಸಂಯಕಾಲ ಕೃಷಿ ಬೆಲೆ ಆಯೋಗದ ಪ್ರಾಯೋಗಿಕ ಕಾರ್ಯ ಯೋಜನೆಯಾದ "ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ" ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಖುರ್ದುವೀರಾಪುರ ಗ್ರಾಮಕ್ಕೆ ಭೇಟಿ ನೀಡಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

04.01.2018 ರಂದು ಸಂಯಕಾಲ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಎ.ಪಿ.ಎಂ.ಸಿ ಗೆ ಭೇಟಿ ನೀಡಿ, ಒಣಮೆಣಸಿನಕಾಯಿ ಮತ್ತಿತರ ಬೆಳೆಗಳ ಧಾರಣೆ ಹಾಗೂ ಬೆಲೆ ಸ್ಥಿರೀಕರಣದ ಬಗ್ಗೆ ಎ.ಪಿ.ಎಂ.ಸಿ ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ರೈತರು ಮತ್ತು ವ್ಯಾಪಾರಸ್ಥರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

04.01.2018 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು, ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಪ್ರಮುಖ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರುಕಟ್ಟೆ, ಖರೀದಿ ಮತ್ತು ಬೆಲೆಗಳ ವಿಚಾರದ ಬಗ್ಗೆ ತಜ್ಞರು, ರೈತರು ಮತ್ತು ಇಲಾಖಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

01.01.2018 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಬೆಂಗಳೂರಿನ ಐ.ಟಿ.ಸಿ. ಹೋಟಲ್ ನಲ್ಲಿ ನಡೆದ ಕರ್ನಾಟಕ vision 2025 ಬಗ್ಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

30.12.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಭೇಟಿ ನೀಡಿ, ತೀರ್ಥಹಳ್ಳಿ ಯ ಎ.ಪಿ.ಎಂ.ಸಿ ಯಲ್ಲಿ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಭತ್ತದ ಉತ್ಪಾದನೆ ಮತ್ತು ಖರೀದಿಗೆ ಸಂಬಂಧಿಸಿದಂತೆ ರೈತರೊಂದಿಗೆ ನಂಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

29.12.2017 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಮೈಸೂರಿನ ಮೈರಾ ಸ್ಕೂಲ್ ಆಫ್ ಬಿಸಿನೆಸಿಗೆ ಕೃಷಿ ಬೆಲೆ ಆಯೋಗದ ಅನುದಾನ ಸಮೇತ ನೀಡಿರುವ ಯೋಜನೆಯ ವರದಿಯ ಬಗ್ಗೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

29.12.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಮೈಸೂರು ಜಿಲ್ಲೆಗೆ ಭೇಟಿ ನೀಡಿ ಮೈಸೂರಿನ ಮಹಾರಾಜ ಸಂಸ್ಥೆಯಲ್ಲಿ ಏರ್ಪಡಿಸಿದ್ದ "ನಿಖರ ಬೇಸಾಯ ಕೃಷಿ ಪದ್ಧತಿಯ" ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

24.12.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಕೃಷಿ ಬೆಲೆ ಆಯೋಗದ ಪ್ರಾಯೋಗಿಕ ಕಾರ್ಯಯೋಜನೆಯಾದ ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿ ಕಾರ್ಯ ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಬೆಳೆಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಧುವಾಲ ಗ್ರಾಮಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಪ್ರಗತಿಯನ್ನು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರು ಮತ್ತು ರೈತರೊಂದಿಗೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

23.12.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ತೋಟಗಾರಿಕಾ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

16.12.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, "ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕ" ಕ್ಕೆ ಕೃಷಿ ಬೆಲೆ ಆಯೋಗದಿಂದ ಅನುದಾನ ಸಮೇತ ನೀಡಿರುವ ಯೋಜನೆಯ ಬಗ್ಗೆ ಪ್ರಗತಿ ಪರಿಶೀಲಿಸಿದರು.

30.11.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ರವರು, ಮಂಗಳೂರು (ದಕ್ಷಿಣ ಕನ್ನಡ) ಜಿಲ್ಲೆಗೆ ಭೇಟಿ ನೀಡಿ, ಮುಂಡುದೆಗುತ್ತು ರಾಮಮೋಹನ ರೈ ಕೃಷಿ ಆವರಣ, ವಿದ್ಯಾಗಿರಿ, ಮೂಡುಬಿದಿರೆಯಲ್ಲಿ ಏರ್ಪಡಿಸಿದ್ದ "ಆಳ್ವಾಸ್ ಕೃಷಿ ಸಿರಿ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

11.11.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ತೋಟಗಾರಿಕೆ ಏರ್ಪಡಿಸಿದ್ದ ಒಂದು ದಿನದ ವಾರಸ್ಥಾರರ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ರೈತರು, ತಜ್ಞರು, ವಿಜ್ಞಾನಿಗಳು ಮುಂತಾದವರು ಭಾಗವಹಿಸಿದ್ದರು.

04.11.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ "ಮಳೆ ಆಶ್ರಯದ ಬಗ್ಗೆ" ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಶ್ರೀ.ಕೆ.ಟಿ. ಗಂಗಾಧರ್, ರೈತ ಮುಂಖಡರು, ಡಾ.ಎಂ.ಕೆ. ನಾಯ್ಕ್, ಸಂಶೋಧನಾ ನಿರ್ದೇಶಕರು, ಡಾ.ಟಿ.ಹೆಚ್.ಗೌಡ, ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ಚಿಕ್ಕಮಗಳೂರು ತಾಲ್ಲೂಕುಗಳಿಂದ ರೈತರು ಮತ್ತು ರೈತ ಮುಂಖಡರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

03.11.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಉಡುಪಿ ಜಿಲ್ಲೆಗೆ ಭೇಟಿ ನೀಡಿ. ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ "ರೈತರ ಆರೋಗ್ಯ ತಪಾಸಣೆ ಮತ್ತು ವ್ಯಕ್ತಿತ್ವ ವಿಕಸನ" ಶಿಬಿರದ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮತ್ತು ಆಯ್ದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.

02.11.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಕೊಡಗು ಜಿಲ್ಲೆಗೆ ಭೇಟಿ ನೀಡಿ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಾಯಿತು. ಈ ಸಭೆಯಲ್ಲಿ ಕಾಳು ಮೆಣಸು ಸೇರಿದಂತೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳ ಮಾರುಕಟ್ಟೆ, ಖರೀದಿ ಮತ್ತು ವಿಚಾರದ ಬಗ್ಗೆ ತಜ್ಞರು, ರೈತರು ಮತ್ತು ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿದರು.

13.10.2017 ರಂದು " ರೈತರ ಅದಾಯ ಮತ್ತು ಕಲ್ಯಾಣ ವೃದ್ದಿ" ಪ್ರಾಯೋಗಿಕ ಕಾರ್ಯಯೋಜನೆಯ ಅಂಗವಾಗಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹುಲುಕಟ್ಟೆ ಕೊಪ್ಪ ಗ್ರಾಮದಲ್ಲಿ ಏರ್ಪಡಿಸಿದ್ದ "ರೈತರ ಆರೋಗ್ಯ ತಪಾಸಣೆಯ" ಸಮಾರಂಭದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

10.10.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬೀದರ್ ಜಿಲ್ಲೆಗೆ ಭೇಟಿ ನೀಡಿ ಬೀದರ್ ನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ, ತೊಗರಿ ಸೇರಿದಂತೆ ಜಿಲ್ಲೆಯ ವಿವಿಧ ಬೆಳೆಗಳ ಖರೀದಿ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು, ತಜ್ಞರು, ರೈತ ಪ್ರತಿನಿಧಿಗಳು ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

09.10.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಬೀದರ್ ನಲ್ಲಿ ಏರ್ಪಡಿಸಿದ್ದ "ಜೋಳ ಮತ್ತು ತೊಗರಿಯ" ಉತ್ಪಾದನೆ, ಖರೀದಿ ಹಾಗೂ ವಿತರಣೆ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಸತೀಶ್ ಚಂದ್ರ, ಕಾರ್ಯದರ್ಶಿಗಳು, ಡೆಕ್ಕನ್ ಡೆವಲಪ್ ಮೆಂಟ್ ಸಂಸ್ಥೆ ರವರು ಮತ್ತು ಕರ್ನಾಟಕ ಆಹಾರ ಆಯೋಗದ ಅಧ್ಯಕ್ಷರು ಹಾಗು ಸದಸ್ಯರು, ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ರೈತರು ಹಾಗೂ ರೈತ ಪ್ರತಿನಿಧಿಗಳು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

06.10.2017 ರಂದು "ICAR-Indian Agricultural Research Instiute" ರವರು ಏರ್ಪಡಿಸಿದ್ದ "Doubling farm Income" ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

02.10.2017 ರಂದು "ರೈತರ ಅದಾಯ ಮತ್ತು ಕಲ್ಯಾಣ ವೃದ್ದಿ" ಪ್ರಾಯೋಗಿಕ ಕಾರ್ಯಯೋಜನೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಧರೆಗುಡ್ಡೆ ಗ್ರಾಮದಲ್ಲಿ ಏರ್ಪಡಿಸಿದ್ದ "ರೈತರ ಆರೋಗ್ಯ ತಪಾಸಣೆಯ" ಸಮಾರಂಭದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

01.10.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು "ರೈತರ ಅದಾಯ ಮತ್ತು ಕಲ್ಯಾಣ ವೃದ್ದಿ" ಪ್ರಾಯೋಗಿಕ ಕಾರ್ಯಯೋಜನೆಗೆ ಆಯ್ಕೆಮಾಡಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಧರೆಗುಡ್ಡೆ ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಪ್ರಗತಿಯ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

30.09.2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು, ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ "ರೈತರ ಅದಾಯ ಮತ್ತು ಕಲ್ಯಾಣ ವೃದ್ದಿ" ಪ್ರಾಯೋಗಿಕ ಕಾರ್ಯಯೋಜನೆಯ "ರೈತರ ಆರೋಗ್ಯ ತಪಾಸಣೆಯ" ಕಾರ್ಯಕ್ರಮದ ಪ್ರಗತಿಯನ್ನು ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು.

28.09.2017 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು, ಮಂಗಳೂರಿಗೆ ಭೇಟಿ ನೀಡಿ ಮಂಗಳೂರಿನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ "ರೈತರ ಅದಾಯ ಮತ್ತು ಕಲ್ಯಾಣ ವೃದ್ದಿ" ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಪ್ರಾಯೋಗಿಕ ಕಾರ್ಯಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಧರೆಗುಡ್ಡೆ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ್ದು, ಪ್ರಗತಿಯನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈತರು, ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳು, ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಲಾಯಿತು.

28.09.2017 ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಪ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ MBA ವಿದ್ಯಾರ್ಥಿಗಳೊಂದಿಗೆ "ಸಂವಾದ ಕಾರ್ಯಕ್ರಮದಲ್ಲಿ" ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

26.09.2017 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಕಾರ್ಯಯೋಜನೆಯ ಪ್ರಗತಿ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರೊಂದಿಗೆ ಚರ್ಚಿಸಿದರು.

26.09.2017 ರಂದು ಚಿತ್ರದುರ್ಗದ ಮುರುಘಾಮಠದಲ್ಲಿ ಏರ್ಪಡಿಸಿದ್ದ "ಶರಣ ಸಂಸ್ಕೃತಿ ಉತ್ಸವ" ಕೃಷಿ ಮೇಳದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

06-09-2017 ರಿಂದ 08-09-2017 ರವರೆಗೆ ಮೂರು ದಿನಗಳ ಕಾಲ ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆಯವರು ಏರ್ಪಡಿಸಿದ್ದ " ಅಡಕೆ ವಲಯದ ಸಹಕಾರಿ ಸಂಘಗಳಲ್ಲಿ ಸುಸ್ಥಿರ ನಿರ್ವಹಣೆ" ಬಗ್ಗೆ ಅಡಕೆ ಮಾರಾಟ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ವೃತ್ತಿ ಮತ್ತು ವ್ಯವಹಾರ ನೈಪುಣ್ಯತೆ ಹೆಚ್ಚಿಸಿ ಅ ಮೂಲಕ ಸಾಮಾರ್ಥ್ಯಾಭಿವೃದ್ದಿ ಬಗ್ಗೆ ತರಬೇತಿ ನೀಡಲಾಯಿತು. ಈ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಐಐಪಿಎಂ ಅಧ್ಯಕ್ಷರಾದ ಡಾ. ಧನಕುಮಾರ್, ಶ್ರೀ. ಕೊಂಕಾಡಿ ಪದ್ಮನಾಭ ಭಟ್, ಅಧ್ಯಕ್ಷರು, ಅಡಕೆ ಮಾರಾಟ ಮಹಾಮಂಡಳಿ, ಡಾ ಡಿ.ಎಲ್. ಮಹೇಶ್ವರ್, ಉಪಕುಲಪತಿಗಳು, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ ಮತ್ತು ಪಿ.ವಿ. ಕೃಷ್ಣ ಭಟ್ ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

29-08-2017ರಂದು ಮಧ್ಯಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮೈಸೂರು ಜಿಲ್ಲೆಗೆ ಭೇಟಿ ನೀಡಿ ಮೈಸೂರಿನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ "Maharaja Research Foundation" (MIT) ಸಂಸ್ಥೆ ರವರು ಮೈಸೂರು ಜಿಲ್ಲೆಯಲ್ಲಿ Precession Farming ಪದ್ದತಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಬಗ್ಗೆ ಇಲಾಖಾಧಿಕಾರಿಗಳು, ತಜ್ಣರು ಮತ್ತಿತರೊಡನೆ ಚರ್ಚಿಸಿದರು.

29-08-2017 ರಂದು ಕರ್ನಾಟಕ ಪ್ರಾಂತ ರೈತ ಸಂಘದವರು ಮಂಡ್ಯ ಜಿಲ್ಲೆಯಲ್ಲಿ ಏರ್ಪಡಿಸಿದ್ದ "ರೈತರ ರಾಜ್ಯ ಮಟ್ಟದ ಅಧ್ಯಯನ ಶಿಬಿರ" ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

23-08-2017 ರಂದು ಸಂಜೆ 4.00 ಗಂಟೆಗೆ ಸರ್ಕಾರದ ಕಾರ್ಯದರ್ಶಿಗಳು, ತೋಟಗಾರಿಕೆ ಇಲಾಖೆ ರವರು ಏರ್ಪಡಿಸಿದ್ದ ಈರುಳ್ಳಿ ಬೆಲೆ ಸ್ಥಿರೀಕರಣ ಹಾಗೂ ಮಾರುಕಟ್ಟೆ ಕುರಿತ ತಾಂತ್ರಿಕ ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಭಾಗವಹಿಸಿದ್ದರು.

23-08-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆರವರು ಏರ್ಪಡಿಸಿದ್ದ ಬೆಳೆ ವಿಮೆ ಬಗ್ಗೆ ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ.ಎಂ. ನಾಡಕರ್ಣಿ, ಐಸೆಕ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎ. ರವೀಂದ್ರ, ನಿರ್ದೇಶಕರಾದ ಡಾ.ಎಂ. ಜಿ. ಚಂದ್ರಕಾಂತ್, ಶ್ರೀ. ಹನುಮನಗೌಡ ಬೆಳಗುರ್ಕಿ, ರೈತ ಪ್ರತಿನಿಧಿ, ಕೃಷಿ ಬೆಲೆ ಆಯೋಗ, ರೈತ ಮುಖಂಡರು ಮತ್ತು ರೈತರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಸಂಜೆವಾಣಿ ಪತ್ರಿಕೆ ಪ್ರಕಟಣೆ

22-08-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿಗೆ ಭೇಟಿ ನೀಡಿ ಕೃಷಿ ಬೆಲೆ ಆಯೋಗದಿಂದ ಅನುದಾನ ಸಮೇತ ನೀಡಿರುವ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರ ಜೊತೆ ಪರಿಶೀಲಿಸಿದರು.

17-08-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ವಿಜಯಪುರ ಎ.ಪಿ.ಎಂ.ಸಿ ಗೆ ಭೇಟಿ ನೀಡಿ ತೊಗರಿ ಸೇರಿದಂತೆ ಜಿಲ್ಲೆಯ ವಿವಿಧ ಬೆಳೆಗಳ ಖರೀದಿ, ಮಾರುಕಟ್ಟೆ ಬಗ್ಗೆ ಪರಿಶೀಲಿಸಿದರು. ನಂತರ ವಿಜಯಪುರ ಜಿಲ್ಲಾ ವ್ಯಾಪಾರಸ್ಥರ ಸಂಘದ ಕಛೇರಿಗೆ ಭೇಟಿ ನೀಡಿ ಇ-ಟ್ರೇಡಿಂಗ್ ಬಗ್ಗೆ ವ್ಯಾಪಾರಸ್ಥರಿಗೆ ಇರುವ ಅಸಮಾಧಾನದ ಬಗ್ಗೆ ಚರ್ಚಿಸಿದರು. ನಂತರ ವಿಜಯಪುರ ಅಪರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷರು ಸೇರಿದಂತೆ, ಕೃಷಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮತ್ತು ಎ.ಪಿ.ಎಂ.ಸಿ ಅಧಿಕಾರಿಗಳ ಜೊತೆ ತೊಗರಿ ಸೇರಿದಂತೆ, ಜಿಲ್ಲೆಯ ವಿವಿಧ ಬೆಳೆಗಳ ಖರೀದಿ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸಭೆ ನಡೆಸಿದರು.

16-08-2017 ರಂದು ವಿಜಯಪುರದಲ್ಲಿ ಆಯೋಜಿಸಿದ್ದ "ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ" ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

14-08-2017 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಕೃಷಿ ವಿಶ್ವವಿದ್ಯಾಲಯ ಧಾರವಾಡಕ್ಕೆ ಭೇಟಿ ನೀಡಿ ಕೃಷಿ ಬೆಲೆ ಆಯೋಗದಿಂದ ಅನುದಾನ ಸಮೇತ ನೀಡಿರುವ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರ ಜೊತೆ ಪರಿಶೀಲಿಸಿದರು.

14-08-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಬಹುಶಾಸ್ತ್ರೀಯ ಸಂಶೋಧನಾ ಅಭಿವೃದ್ದಿ ಸಂಸ್ಥೆರವರು ಏರ್ಪಡಿಸಿದ್ದ "ಕರ್ನಾಟಕದಲ್ಲಿ ಬೆಳೆ ವಿಮೆ" ಸವಾಲಾತ್ಮಕವಲಯಕ್ಕೆ ಪರಿಹಾರಗಳು ಎಂಬ ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಧಾರವಾಡದ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಿ.ಎಂ.ಡಿ.ಆರ್. ನಿರ್ದೇಶಕರು, ಶ್ರೀ. ಹನುಮನ ಗೌಡ ಬೆಳಗುರ್ಕಿ, ರೈತ ಪ್ರತಿನಿಧಿ, ಕೃಷಿ ಬೆಲೆ ಆಯೋಗ ಮತ್ತು ರೈತ ಮುಖಂಡರು, ರೈತರು ಭಾಗವಹಿಸಿದ್ದರು.

11-08-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತುಮರಿ ರವರು ಏರ್ಪಡಿಸಿದ್ದ "ಅಡಕೆ ಮತ್ತು ಉಪ ಬೆಳೆಗಳಿಗೆ ಆಧುನಿಕ ಮಾರುಕಟ್ಟೆ ವಿಧಗಳು" ಎಂಬ ಒಂದು ದಿನದ ತಾಂತ್ರಿಕ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಡಾ. ವಿಜಯ್ ಕುಮಾರ್, ಪ್ರಾಧ್ಯಪಕರು, ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ ಮತ್ತು ಅಧ್ಯಕ್ಷರು, ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವರು ಭಾಗವಹಿಸಿದ್ದರು.

10-08-2017 ರಂದು ಆಹಾರ ಹಕ್ಕಿಗಾಗಿ ಆಂದೋಲನ - ಕರ್ನಾಟಕ ರವರು ಹಮ್ಮಿಕೊಂಡಿದ್ದ "ಎರಡು ದಿನಗಳ ರಾಜ್ಯಮಟ್ಟದ ಸಮಾವೇಶ" ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

07-08-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಕೋಲಾರ ಜಿಲ್ಲೆಗೆ ಭೇಟಿ ನೀಡಿ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಕಾರ್ಯಯೋಜನೆಯ ಅಂಗವಾಗಿ ಬೈಯಪ್ಪನಹಳ್ಳಿ ಯಲ್ಲಿ ಏರ್ಪಡಿಸಿದ್ದ ರೈತರ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

21-07-2017 ರಂದು ಅಪರಾಹ್ನ ಕೃಷಿ ಬೆಲೆ ಆಯೋಗದ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಕಾರ್ಯಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಕಲಬುರಗಿಯ ಜಿಲ್ಲೆಯ ಆಳಂದ ತಾಲ್ಲೂಕಿನ ತೆಲ್ಲೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸಂಬಂದಿಸಿದ ಅಧಿಕಾರಿಗಳು, ತಜ್ಞರು ಮತ್ತು ರೈತರೊಂದಿಗೆ ಗ್ರಾಮ ಸಭೆಯನ್ನು ನಡೆಸಲಾಯಿತು.

21-07-2017 ರಂದು ಪೂರ್ವಾಹ್ನ ಕಲಬುರಗಿಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಪ್ರಾಯೋಗಿಕ ಕಾರ್ಯ ಯೋಜನೆಯನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ತೆಲ್ಲೂರು ಗ್ರಾಮದಲ್ಲಿ ಅನುಷ್ಠಾನಗೊಳಿಸಲು ಆಯೋಜಿಸಿದ್ದ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ರೈತರು ಮತ್ತು ತಜ್ಞರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ    |    ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

20-07-2017 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಜಿಲ್ಲೆಯ ವಿವಿಧ ಬೆಳೆಗಳ ಖರೀದಿ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸಂಬಂದಿಸಿದ ಅಧಿಕಾರಿಗಳು, ತಜ್ಞರು ಮತ್ತು ರೈತಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

20-07-2017 ರಂದು ಪೂರ್ವಾಹ್ನ ರಾಯಚೂರಿನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಪ್ರಾಯೋಗಿಕ ಕಾರ್ಯ ಯೋಜನೆಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಜಕಲದಿನ್ನಿ ಗ್ರಾಮದಲ್ಲಿ ಅನುಷ್ಠಾನಗೊಳಿಸಲು ಆಯೋಜಿಸಿದ್ದ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು, ರೈತರು ಮತ್ತು ತಜ್ಞರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

19-07-2017 ರಂದು ಅಪರಾಹ್ನ ಕೃಷಿ ಬೆಲೆ ಆಯೋಗದ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಕಾರ್ಯಯೋಜನೆಗೆ ಆಯ್ಕೆ ಮಾಡಿಕೊಂಡಿರುವ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಜಕಲದಿನ್ನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸಂಬಂದಿಸಿದ ಅಧಿಕಾರಿಗಳು, ತಜ್ಞರು ಮತ್ತು ರೈತರೊಂದಿಗೆ ಗ್ರಾಮ ಸಭೆಯನ್ನು ನಡೆಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

19-07-2017 ರಂದು ಪೂರ್ವಾಹ್ನ ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಐಸಿಎಆರ್ ಪ್ರಾಯೋಜಿತ ಶಾರ್ಟ್ ಕೋರ್ಸ್ ತರಬೇತಿ ಕಾರ್ಯಾಗಾರವನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಉದ್ಘಾಟಿಸಿದರು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೃ.ವಿ.ವಿ. ಕುಲಪತಿಗಳಾದ ಡಾ.ಪಿ. ಸಾಲಿಮಠ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಕೃ.ವಿ.ವಿ. ರಿಜಿಸ್ಟ್ರಾರ್ ಡಾ. ಡಿ.ಎಂ. ಚಂದರಗಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಾಗೃತಿ ದೇಶಮಾನ್ಯ ಮತ್ತು ಕೃ.ವಿ.ವಿ. ಡೀನ್ ಡಾ.ಎ.ಎಸ್. ಹಳೆಪ್ಯಾಟಿ ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

19-07-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಕೃಷಿ ಬೆಲೆ ಆಯೋಗ ಕೃಷಿ ವಿಶ್ವವಿದ್ಯಾನಿಲಯಕ್ಕೆ ಅನುದಾನ ಸಮೇತ ನೀಡಿರುವ ಯೋಜನೆಗಳ ಪರಿಶೀಲನೆ ನಡೆಸಿದರು.

04-07-2017 ರಿಂದ 06-07-2017 ರವರೆಗೆ ಮೂರು ದಿನಗಳ ಕಾಲ ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದಲ್ಲಿ ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆಯವರು ಏರ್ಪಡಿಸಿದ್ದ ತೆಂಗು ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರುಗಳಿಗೆ , ಸಾಮರ್ಥ್ಯ ವೃದ್ದಿ, ಕೌಶಲ್ಯ ವೃದ್ದಿ, ನೈಪುಣ್ಯತೆ ಮುಂತಾದವುಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು. ಈ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಮತ್ತು ಐಐಪಿಎಂ ಅಧ್ಯಕ್ಷರಾದ ಡಾ. ಧನಕುಮಾರ್, ರವರು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

24-06-2017 ಮತ್ತು 25-06-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ರವರ ಜಂಟಿ ಸಹಭಾಗಿತ್ವದಲ್ಲಿ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಕಾರ್ಯಕ್ರಮದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸ್ವಾಗತ ಭಾಷಣ ಮತ್ತು ಕಾರ್ಯಾಗಾರದ ಹಿನ್ನೆಲೆಯನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ ವಿವರಿಸಿದರು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಐಸೆಕ್ ಸಂಸ್ಥೆಯ ನಿರ್ದೇಶಕರಾದ ಡಾ. ಎಂ. ಜಿ. ಚಂದ್ರಕಾಂತ್ ರವರು ವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾರ್ಯದರ್ಶಿಗಳು ಹಾಗೂ ರೈತ ಆದಾಯ ಸಮಿತಿಯ ಮುಖ್ಯಸ್ಥರಾದ ಡಾ. ಅಶೋಕ್ ದಳವಾಯಿ, ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ. ವಿಜಯ್ ಪಾಲ್ ಶರ್ಮಾ, ಡಾ. ಎಸ್. ಅಯ್ಯಪ್ಪನ್, ಮಾಜಿ ವ್ಯವಸ್ಥಪಾಕ ನಿರ್ದೇಶಕರು, ಐಸಿಎಆರ್ ನವ ದೆಹಲಿ, ಶ್ರೀ. ಎಮ್. ವಿ. ನಾಡಕರ್ಣಿ, ಮಾಜಿ ಉಪ ಕುಲಪತಿಗಳು, ಶ್ರೀ. ವಿಜಯ ಜಾವಂಧಿಯ, ರೈತ ಮುಖಂಡರು, ಶ್ರೀ. ಹನುಮನಗೌಡ ಬೆಳಗುರ್ಕಿ, ರೈತ ಪ್ರತಿನಿಧಿ, ಕೃಷಿ ಬೆಲೆ ಆಯೋಗ, ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ ಕಾರ್ಯಯೋಜನೆಗೆ ಆಯ್ಕೆಯಾದ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು, ಸಹ ಮುಖ್ಯಸ್ಥರು, ಸಂಶೋಧನಾ ಸಹಾಯಕರು, ಆಯ್ದ 25 ಜನ ರೈತರು, ತಜ್ಞರು, ರಾಜ್ಯದ ಪ್ರಮುಖ ರೈತ ಮುಖಂಡರು, ರೈತ ಪ್ರತಿನಿಧಿಗಳು, ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕಗಳ ಪ್ರಧಾನ ಸಂಶೋಧಕರು ಮತ್ತು ಸಂಶೋಧನಾ ಸಹಾಯಕರು, ಮುಂತಾದವರು ಭಾಗವಹಿಸಿದ್ದರು.

19-06-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಯವರು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ, ಈಗಾಗಲೇ ಆಯೋಜಿಸಿದ್ದ ಅಡಿಕೆ ಮತ್ತು ಭತ್ತದ ಬೆಳೆಗಳ ಕಾರ್ಯಕ್ರಮದ ಬಗ್ಗೆ ಪರಿಶೀಲಿಸಿದರು.

09-06-2017 ರಂದು ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ "ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕ "ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಾಗಾರದಲ್ಲಿ ಕೃಷಿ ಬೆಲೆ ಆಯೋಗದ ರೈತ ಪ್ರತಿನಿಧಿಯಾದ ಶ್ರೀ. ಹನುಮನಗೌಡ ಬೆಳಗುರ್ಕಿ ರವರು ಮತ್ತು ಕೃಷಿ ವಿಶ್ವವಿದ್ಯಾಲಯ ಧಾರವಾಡ, ರಾಯಚೂರು, ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ಮಾರುಕಟ್ಟೆ ಮಾಹಿತಿ ಘಟಕಗಳ ಪ್ರಧಾನ ಸಂಶೋಧಕರು ಮತ್ತು ರೈತರು ಭಾಗವಹಿಸಿದ್ದರು.

03-06-2017 ರಿಂದ 05-06-2017 ವರೆಗೆ ಮೂರು ದಿನಗಳ ಕಾಲ ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ ಏರ್ಪಡಿಸಿದ್ದ. ಕರ್ನಾಟಕದಲ್ಲಿ ಗುಂಪು ಕೃಷಿ ಮಾರಾಟ ವ್ಯವಸ್ಥೆ ಸದೃಡಗೊಳಿಸುವುದರ ಬಗ್ಗೆ ಮೂರು ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯಕ್ರಮಲ್ಲಿ "ಸಾವಯವ ಉತ್ಪಾದಕ ಸಂಘಟನೆಗಳಿಗೆ" ಯಶಸ್ವಿಯಾಗಿ ನಡೆಸುವ ನೈಪುಣ್ಯತೆ, ನಾಯಕತ್ವ, ವ್ಯವಹಾರ ಚತುರತೆ, ಆರ್ಥಿಕ ಮತ್ತು ಹಣಕಾಸು ನಿರ್ವಹಣೆ ಇತ್ಯಾದಿಗಳ ಬಗ್ಗೆ ಆಳವಾದ ಅರಿವು ಮತ್ತು ಜ್ಞಾನ ತರಬೇತಿಗಳನ್ನು ನೀಡಿ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತು ಕೊಡಲಾಯಿತು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

01-06-2017 ರಂದು ಭಾರತದ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು ರವರು ಏರ್ಪಡಿಸಿದ್ದ ಭಾಗೀದಾರರ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

29-05-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಕೋಲಾರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ತಾಂತ್ರಿಕ ಸಿಬ್ಬಂದಿಯ ಆಯ್ಕೆಯಲ್ಲಿ ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ತಜ್ಞರೊಂದಿಗೆ ಚರ್ಚೆ ಮಾಡಿದರು. ನಂತರ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ" ಯೋಜನೆಗೆ ಆಯ್ಕೆಯಾದ ಬೈಯಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

27-05-2017 ರಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ, ಬೆಂಗಳೂರು ರವರು ಏರ್ಪಡಿಸಿದ್ದ ಭಾಗೀದಾರರ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

23-05-2017 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ದೂಪದಹಳ್ಳಿಯಲ್ಲಿ ಸಾವಯವ ಕೃಷಿ ಮುನ್ನಡೆಗಾಗಿ ಬೆಂಗಳೂರಿನ ಇಕ್ರಾ ಸಂಸ್ಥೆ ರವರು ಏರ್ಪಡಿಸಿದ ರೈತರ ಜಾಥಾ ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

22-05-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ ಸಹಭಾಗಿತ್ವದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶೃಂಗೇರಿಯಲ್ಲಿ ಏರ್ಪಡಿಸಿದ್ದ "ಅಡಕೆ ಮತ್ತು ಉಪ ಬೆಳೆಗಳಿಗೆ ಆಧುನಿಕ ಮಾರುಕಟ್ಟೆ ವಿಧಗಳು" ಎಂಬ ಒಂದು ದಿನದ ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದ ಸ್ವಾಗತ ಭಾಷಣವನ್ನು ಶ್ರೀ. ನಾರಾಯಣ ಸ್ವಾಮಿ, ಮುಖ್ಯಸ್ಥರು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಆನೆಗುಂದ ರವರು ಮಾಡಿದರು. ನಂತರ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ ರವರು ಪ್ರಾಸ್ತಾವಿಕ ನುಡಿಯನ್ನು ಮಂಡಿಸಿದರು. ಶ್ರೀ. ಕೆ.ಟಿ. ಗಂಗಾಧರ್, ಕಾರ್ಯಾಧ್ಯಕ್ಷರು, ಕರ್ನಾಟಕ ರಾಜ್ಯರೈತ ಸಂಘ ರವರು ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಶ್ರೀಮತಿ. ಸತ್ಯವತಿ, ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ   |   ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

20-05-2017 ರಂದು ರಾಷ್ಟ್ರೀಯ ಮಣ್ಣು ಸರ್ವೇಕ್ಷಣಾ ಮತ್ತು ಭೂ ಬಳಕೆ ನಿಯೋಜನೆ ಸಂಸ್ಥೆ ರವರು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಭಾಗಿತ್ವದಲ್ಲಿ ಏರ್ಪಡಿಸಿದ ಭಾಗೀದಾರರ ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದ ಆಹಾರ ಭದ್ರತೆ ಮತ್ತು ಮಣ್ಣು, ಪರಿಸರ, ಹವಾಮಾನಗಳಿಗೆ ಹೊಂದಿಕೊಳ್ಳುವ ವಿವಿಧ ಬೆಳೆಗಳ ನಕ್ಷೆ ರಚಿಸುವ ಅಧ್ಯಯನದ ಬಗ್ಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪತ್ರಿಕೆ ಪ್ರಕಟಣೆ

12-05-2017 ರಂದು ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ ರವರು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಭಾಗಿತ್ವದಲ್ಲಿ ಏರ್ಪಡಿಸಿದ ಭಾಗೀದಾರರ ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಕರ್ನಾಟಕ ದಲ್ಲಿ ಕೃಷಿ ಮಾರುಕಟ್ಟೆಗಾಗಿ ಸಾಮೂಹಿಕ ಗುಂಪು ವಿಧಾನ ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.

02-05-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ. ಎನ್. ಪ್ರಕಾಶ್ ಕಮ್ಮರಡಿ ಯವರು ಚಿಕ್ಕಮಗಳೂರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಬೀಳು ಭೂಮಿ, ಮಳೆ ಆಶ್ರಯ ಭತ್ತ, ಅಡಕೆ ಮತ್ತು ಉಪ ಉತ್ಪನ್ನಗಳ ಮಾರುಕಟ್ಟೆ ಹಾಗೂ ಬೆಲೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ರೈತರು, ತಜ್ಞರು ಹಾಗೂ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

01-05-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ. ಎನ್. ಪ್ರಕಾಶ್ ಕಮ್ಮರಡಿ ಯವರು ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕುಗಳಿಗೆ ಭೇಟಿ ನೀಡಿ ಬೀಳು ಭೂಮಿ ಮತ್ತು ಹಳದಿ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಿದರು.

30-04-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ. ಎನ್. ಪ್ರಕಾಶ್ ಕಮ್ಮರಡಿ ಯವರು ತೀರ್ಥಹಳ್ಳಿ ಗೆ ಭೇಟಿ ನೀಡಿ ಮಲೆನಾಡು ಕ್ಲಬ್ ರವರು ಆಯೋಜಿಸಿದ್ದ " ರೈತರ ಸಭೆ" ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

23-04-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಅಧ್ಯಯನ ಸಂಸ್ಥೆಯವರು ಏರ್ಪಡಿಸಿದ್ದ "ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ ಕಾರ್ಯಕ್ರಮದ" ಎಲ್ಲೆಗೆರೆ ಸಮೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮ್ರರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಜ಼ಿ. ಚಂದ್ರಕಾಂತ್ ರವರು ಕಾರ್ಯಕ್ರಮವನ್ನು ಮುನ್ನಡೆಸಿದರು. ಈ ಕಾರ್ಯಕ್ರಮದಲ್ಲಿ ಬೆಲೆ ಆಯೋಗದ ತಾಂತ್ರಿಕ ಸಲಹೆಗಾರರು, ಐಸೆಕ್ ಸಂಸ್ಥೆಯ ವಿಜ್ಞಾನಿಗಳು, ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಎಂಟು ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಮತ್ತು ಕಾರ್ಯಕ್ರಮ ಸಂಯೋಜಕರು ಹಾಗೂ ಅವರ ತಂಡದವರು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

14-04-2017 ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಸಿಎಆರ್ ಕಿರು ಧಾನ್ಯಗಳ ಅಖಿಲ ಭಾರತೀಯ ಬೆಳೆ ಸಂಶೋಧನಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ 28ನೆಯ ವಾರ್ಷಿಕ ಗುಂಪು ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

13-04-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದವು ಏರ್ಪಡಿಸಿದ್ದ "ಬೆಲೆ ವಸ್ತುಸ್ಥಿತಿ ಮತ್ತು ಮುನ್ನಂದಾಜು ನಿರೂಪಣೆಗಾಗಿ ಸಿದ್ದಪಡಿಸಿರುವ ಡ್ಯಾಶ್ ಬೋರ್ಡ್" ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಮಾನ್ಯ ಕೃಷಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಕೃಷಿ ಆಯುಕ್ತರು, ಕೃಷಿ ನಿರ್ದೇಶಕರು, ಆಯೋಗದ ಸದಸ್ಯರಾದ ಶ್ರೀ ಹನುಮನ ಗೌಡ ಬೆಳಗುರ್ಕಿ, ಡ್ಯಾಶ್ ಬೋರ್ಡ್ ಸಂಶೋಧಕ ಡಾ. ಲಲಿತ್ ಅಚ್ಯುತ್ ಮತ್ತು ರಾಜ್ಯದ ವಿವಿಧ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕಗಳ ಮುಖ್ಯಸ್ಥರು ಮುಂತಾದವರು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

07-04-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿಗೆ ಭೇಟಿ ನೀಡಿ ತಹಶೀಲ್ದಾರರ ಸಮ್ಮುಖದಲ್ಲಿ ಏರ್ಪಡಿಸಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ "ರಾಜ್ಯದ ಬೀಳು ಭೂಮಿ ಅಭಿವೃದ್ದಿ" ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು, ತಜ್ಞರು, ರೈತರು ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

04-04-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಹಾಗೂ ತಾಂತ್ರಿಕ ಸಲಹೆಗಾರರು ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ "ರೈತರ ಆದಾಯ ಮತ್ತು ಕಲ್ಯಾಣವೃದ್ದಿ" ಕಾರ್ಯಕ್ರಮದ ಉದ್ಘಾಟನೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರು, ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ರೈತರು ಮುಂತಾದವರು ಭಾಗವಹಿಸಿದ್ದರು.

24-03-2017 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾನಿಲಯ, ಜೌರಂಗಾಬಾದ್ ನಲ್ಲಿ ಏರ್ಪಡಿಸಿದ ಒಂದು ದಿನದ ವಿಚಾರ ಸಂಕಿರಣದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವಿಚಾರ ಸಂಕಿರಣದಲ್ಲಿ "ಭಾರತೀಯ ಕೃಷಿ: ಭೂತ, ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

22-03-2017 ರಂದು ವಿಶ್ವ ಜಲ ದಿನ ಅಂಗವಾಗಿ ಕರ್ನಾಟಕ ಕೃಷಿ ಬೆಲೆ ಆಯೋಗವು ರಾಜ್ಯದ ಜಲ ಸಂಪನ್ಮೂಲದ ಸುಸ್ಥಿರ ನಿರ್ವಹಣೆಗಾಗಿ ದುಂಡು ಮೇಜಿನ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಚರ್ಚಾ ಗೋಷ್ಠಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಬಿ.ಆರ್. ಪಾಟೀಲ್ ರವರು ಹಾಗೂ ಕೃಷಿ ಬೆಲೆ ಆಯೋಗದ ಸದಸ್ಯರಾದ ಶ್ರೀ ಹನುಮನ ಗೌಡ ಬೆಳಗುರ್ಕಿ, ಜಲ ಸಂನ್ಮೂಲ ತಜ್ಞರಾದ ಡಾ. ಮುಂಕುದ ಜೋಶಿ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರ ಸ್ವಾಮಿ, ಭೂ ಗರ್ಭ ಶಾಸ್ರ್ತಜ್ಞ ಡಾ. ಸಾವ್ ಕಾರ್, ಸಮಾಜ ಕಾರ್ಯಕರ್ತೆ ಶ್ರೀಮತಿ ಗಾಯತ್ರಿ, ಆರ್ಕಾವತಿ ನದಿ ಸಂರಕ್ಷಣಾ ಸಮಿತಿಯ ಶ್ರೀ ಜನಾರ್ಧನ್ ಹೆಸರು ಗದ್ದೆ ಮುಂತಾದವರು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

10-03-2017 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಏರ್ಪಡಿಸಿದ್ದ "ಆಯವ್ಯಯ ಮತ್ತ ಕೃಷಿ" ವಿಚಾರ ಸಂಕಿರಣದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವಿಚಾರ ಸಂಕಿರಣವನ್ನು ಡಾ.ಶಿವಣ್ಣ, ಉಪ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರವರು ವಹಿಸಿದ್ದರು. ಈ ವಿಚಾರ ಸಂಕಿರಣದಲ್ಲಿ ರೈತ ಮುಖಂಡರು ಮತ್ತು ರೈತ ಪ್ರತಿನಿಧಿಗಳು ಭಾಗವಹಿಸಿದ್ದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

03-03-2017 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ. ಜಿ. ಸೆಂಟರ್ ನಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವಿಚಾರ ಸಂಕಿರಣದಲ್ಲಿ "ಆಧುನಿಕ ಮಲೆನಾಡು ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.

02-03-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದೊಂದಿಗೆ ಏರ್ಪಡಿಸಿದ್ದ "ರಾಜ್ಯದ ಬೀಳು ಭೂಮಿ ಸದ್ಬಳಕೆ" ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಅಭಿವೃದ್ದಿ ಆಯುಕ್ತರು, ಸರ್ಕಾರದ ಕಾರ್ಯದರ್ಶಿಗಳು ಹಾಗೂ ನೀತಿ ಆಯೋಗದ ಮುಖ್ಯಸ್ಥರಾದ ಡಾ.ಟಿ. ಹಕ್ ರವರು, ಕೃಷಿ ಆಯುಕ್ತರು ಮತ್ತು ಕೃಷಿ ನಿರ್ದೇಶಕರು ಭಾಗವಹಿಸಿದ್ದರು. ಕಾರ್ಯಾಗಾರಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯವ್ಯಕ್ತಿಗಳನ್ನು ಮತ್ತು ರೈತ ಮುಖಂಡರನ್ನು ಹಾಗೂ ರೈತ ಪ್ರತಿನಿದಿಗಳನ್ನು ಕೃಷಿ ನಿರ್ದೇಶಕರು ಸ್ವಾಗತಿಸಿದರು. ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ ರವರು ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಾಗಾರದಲ್ಲಿ ರಾಜ್ಯದ ಪ್ರಮುಖ ರೈತ ಮುಖಂಡರು, ರೈತ ಪ್ರತಿನಿದಿಗಳು ಮತ್ತು ರೈತರು ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

20-02-2017 ರಂದು ಸಾಮಾಜಿಕ ಮತ್ತು ಅರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯು ಕರ್ನಾಟಕ ಕೃಷಿ ಬೆಲೆ ಅಯೋಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರೈತರ ಆದಾಯ ಮತ್ತು ಕಲ್ಯಾಣ ವೃದ್ದಿ ಕಾರ್ಯಕ್ರಮದ ಪ್ರಾರಂಭಿಕ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಮಾನ್ಯ ಕೃಷಿ ಸಚಿವರಾದ ಶ್ರೀ ಕೃಷ್ಣಬೈರೆಗೌಡ ರವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ವಹಿಸಿದ್ದರು. ಡಾ.ಪಿ. ರವೀಂದ್ರ, ಭಾ.ಆ.ಸೆ. ಅಧ್ಯಕ್ಷರು, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ, ಇವರು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ನಿರ್ದೇಶಕರಾದ ಡಾ.ಎಂ. ಜಿ. ಚಂದ್ರಕಾಂತ್ ರವರು ಸ್ವಾಗತ ಭಾಷಣವನ್ನು ಮಾಡಿದರು. ಅತಿಥಿಗಳಾಗಿ ಕೃಷಿ ಆಹಾರ ನೀತಿ ವಿಶ್ಲೇಷಕರಾದ ಪ್ರೊ. ದೇವೇಂದ್ರ ಶರ್ಮ, ಡಾ.ಎಂ. ಮಹದೇವಪ್ಪ, ನಿವೃತ್ತ ಉಪಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಮತ್ತು ಕೃಷಿ ಬೆಲೆ ಆಯೋಗದ ಸದಸ್ಯರಾದ ಶ್ರೀ ಹನುಮನಗೌಡ ಬೆಳಗುರ್ಕಿ ರವರು ಭಾಗವಹಿಸಿದ್ದರು. ಈ ಕಾರ್ಯಾಗಾರಕ್ಕೆ ಸರ್ಕಾರದ ಉನ್ನತ ಅಧಿಕಾರಿಗಳು, ತಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ಪ್ರಗತಿಪರ ರೈತರು ಮುಂತಾದವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ   |   ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

18-02-2017 ರಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಇವರು "ರೈತರ ಸಮಸ್ಯೆಗಳು ಮತ್ತು ಕೃಷಿ ಬಿಕ್ಕಟ್ಟು" ಕುರಿತು ಬೆಂಗಳೂರಿನ ಗಾಂಧೀ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸುಪ್ರಿಮ್ ಕೋರ್ಟಿನ ನಿವೃತ್ತ ನ್ಯಾಯಧೀಶರಾದ ಶ್ರೀಯುತ ಗೌಪಾಲಗೌಡ ರವರು ಉದ್ಘಾಟಿಸಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀಯುತ ಶಾಂತಕುಮಾರ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯಸ್ಥರುಗಳಾಗಿ ಕೃಷಿ ಆಹಾರ ನೀತಿ ವಿಶ್ಲೇಷಕರಾದ ಪ್ರೊ. ದೇವೇಂದ್ರ ಶರ್ಮ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಕೆ.ಎಸ್. ಪುಟ್ಟಣ್ಯ ರವರು ಭಾಗವಹಿಸಿದ್ದರು.

18-01-2017 ರಂದು ವಿಜಯಪುರ ಜಿಲ್ಲೆಯಲ್ಲಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದವರು ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾದ ಶ್ರೀ. ಹನುಮನ ಗೌಡ ಬೆಳಗುರ್ಕಿ ರವರು ಹಾಗೂ ಆಯೋಗದ ತಾಂತ್ರಿಕ ಸಲಹೆಗಾರರಾದ ಡಾ. ಕೆ. ಜೆ. ಪರಮೇಶ್ವರಪ್ಪ, ತಾಂತ್ರಿಕ ಸಹಾಯಕರಾದ ಪಿ.ಎಸ್. ಗಿರೀಶ್ ರವರು ಭಾಗವಹಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ಸಂಬಂಧಿಸಿದ ಅಧಿಕಾರಿಗಳು, ತೋಟಗಾರಿಕೆ ವಿಶ್ವವಿದ್ಯಾನಿಲಯ ಬಾಗಲಕೋಟೆಯ ಸಂಬಂಧಿಸಿದ ಅಧಿಕಾರಿಗಳು, ತಜ್ಞರು ಹಾಗೂ ಮತ್ತಿತರರು ಭಾಗವಹಿಸಿದ್ದರು. ಈ ಸಭೆಯಲ್ಲಿ ಹಸಿ ಮತ್ತು ಒಣ ದ್ರಾಕ್ಷಿ ಬೆಲೆ ಮತ್ತು ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

17-01-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾದ ಶ್ರೀ. ಹನುಮನ ಗೌಡ ಬೆಳಗುರ್ಕಿ ರವರು ಹಾಗೂ ಆಯೋಗದ ತಾಂತ್ರಿಕ ಸಲಹೆಗಾರರಾದ ಡಾ. ಕೆ. ಜೆ. ಪರಮೇಶ್ವರಪ್ಪ, ತಾಂತ್ರಿಕ ಸಹಾಯಕರಾದ ಪಿ.ಎಸ್. ಗಿರೀಶ್ ರವರು ಯಾದಗಿರಿ ಜಿಲ್ಲೆಯ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂಧಿಗೆ ಬೆಳೆಗಳ ಮಾರಾಟದ ಬಗ್ಗೆ ಪರಿಶೀಲಿಸಿದ್ದರು.

17-01-2017 ರಂದು ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ ರೈತರ ಆದಾಯ ಮತ್ತು ಕಲ್ಯಾಣವೃದ್ದಿ ಕಾರ್ಯಾಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾದ ಶ್ರೀ. ಹನುಮನ ಗೌಡ ಬೆಳಗುರ್ಕಿ ರವರು ಹಾಗೂ ಆಯೋಗದ ತಾಂತ್ರಿಕ ಸಲಹೆಗಾರರಾದ ಡಾ. ಕೆ. ಜೆ. ಪರಮೇಶ್ವರಪ್ಪ, ತಾಂತ್ರಿಕ ಸಹಾಯಕರಾದ ಪಿ.ಎಸ್. ಗಿರೀಶ್ ರವರು ಭಾಗವಹಿಸಿದ್ದರು ಮತ್ತು ಜಂಟಿ ಕೃಷಿ ನಿರ್ದೇಶಕರು, ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಮುಖ್ಯಸ್ಥರು, ಕರ್ನಾಟಕ ರಾಜ್ಯ ತೊಗರಿ ಮಂಡಳಿಯ ಅಧಿಕಾರಿಗಳು, ರೈತ ಪ್ರತಿನಿಧಿ, ವಿಜ್ಞಾನಿಗಳು, ತಜ್ಞರು ಹಾಗೂ ಮತ್ತಿತರರು ಭಾಗವಹಿಸಿದ್ದರು. ನಂತರ ಎ. ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂಧಿಗೆ ಚರ್ಚಿಸಿದರು.

16-01-2017 ರಂದು ರಾಯಚೂರಿನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ ರೈತರ ಆದಾಯ ಮತ್ತು ಕಲ್ಯಾಣವೃದ್ದಿ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಸದಸ್ಯರಾದ ಶ್ರೀ. ಹನುಮನ ಗೌಡ ಬೆಳಗುರ್ಕಿ ರವರು ಹಾಗೂ ಆಯೋಗದ ತಾಂತ್ರಿಕ ಸಲಹೆಗಾರರಾದ ಡಾ. ಕೆ. ಜೆ. ಪರಮೇಶ್ವರಪ್ಪ, ತಾಂತ್ರಿಕ ಸಹಾಯಕರಾದ ಪಿ.ಎಸ್. ಗಿರೀಶ್ ರವರು ಭಾಗವಹಿಸಿದ್ದರು ಮತ್ತು ಜಂಟಿ ಕೃಷಿ ನಿರ್ದೇಶಕರು, ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರು, ತಜ್ಞರು ಹಾಗೂ ಮತ್ತಿತರರು ಭಾಗವಹಿಸಿದ್ದರು.

09-01-2017 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ರೈತರು ಧರಣಿ ಸತ್ಯಾಗ್ರಹ ಕುಳಿತಿರುವ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತ ರೈತರೊಡನೆ ಸಮಾಲೋಚನೆ ನಡೆಸಿದರು. ನಂತರ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

05-01-2017 ರಂದು ರಾಜ್ಯ ರೈತ ಸಂಘ ಹಾಗೂ ಮಧುರ ಸ್ವಾಮಿನಾಥನ್ ರವರ ನೇತೃತ್ವದಲ್ಲಿ ಏರ್ಪಡಿಸಿದ ಕರ್ನಾಟಕದ ಮೂರು ಹಳ್ಳಿಗಳ ಸಾಮಾಜಿಕ- ಆರ್ಥಿಕ ಸಮೀಕ್ಷೆ ಕಾರ್ಷಿಕ ಸಂಬಂಧದ ಕುರಿತ ಅಧ್ಯಯನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

23-12-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಗಳೂರು, ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆ ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ "ರೈತರ ಆದಾಯ ಮತ್ತು ಕಲ್ಯಾಣವೃದ್ದಿ" ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು, ಸನ್ಮಾನ್ಯ ಶ್ರೀ ಯು. ಟಿ. ಖಾದರ್, ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸನ್ಮಾನ್ಯ ಶ್ರೀ ಬಿ. ರಮಾನಾಥ ರೈ, ಮಾನ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ, ಸಚಿವರು ಸಭೆಯನ್ನು ಉದ್ಘಾಟಿಸಿದರು. ಈ ಕಾರ್ಯಾಕ್ರಮದಲ್ಲಿ ಸ್ಥಳೀಯ ಶಾಸಕರಾದ ನವೀನ್ ಕುಮಾರ್ ಕಟೀಲ್ ರವರು, ಸನ್ಮಾನ್ಯ ಶ್ರೀ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ಸರ್ಕಾರ, ಕೃಷಿ ಮತ್ತು ತೋಟಗಾರಿಕೆ ಅಧಾರಿಗಳು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

20-12-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ತುಮಕೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ್ದ "ರೈತರ ಆದಾಯ ಮತ್ತು ಕಲ್ಯಾಣವೃದ್ದಿ" ಬಗ್ಗೆ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು, ತಜ್ಞರು, ವಿಜ್ಞಾನಿಗಳು ಮತ್ತಿತರರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

19-12-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಏರ್ಪಡಿಸಿದ "ರೈತರ ಆದಾಯ ಮತ್ತು ಕಲ್ಯಾಣವೃದ್ದಿ" ಬಗ್ಗೆ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಮತ್ತು ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರು, ತಜ್ಞರು, ವಿಜ್ಞಾನಿಗಳು ಮತ್ತಿತರರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

18-12-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ತೋಟಗಾರಿಕೆ ವಿಶ್ವವಿದ್ಯಾನಿಲಯ ಬಾಗಲಕೋಟೆ ರವರು ಏರ್ಪಡಿಸಿದ " ತೋಟಗಾರಿಕೆ ಮೇಳ" ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

03-12-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮಂಗಳೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ "ರೈತರ ಆದಾಯ ಮತ್ತು ಕಲ್ಯಾಣವೃದ್ದಿ" ಕಾರ್ಯಕ್ರಮದ ನೀಲಿ ನಕ್ಷೆ ತಯಾರಿಸಿ ಕಾರ್ಯಾನುಷ್ಟಾನ ಮಾಡುವ ಬಗ್ಗೆ ಸಭೆಯನ್ನು ಏರ್ಪಡಿಸಿದ್ದರು. ಈ ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು, ಕ್ಯಾಂಪ್ಕೋ ಸಂಸ್ಥೆಯ ಮುಖ್ಯಸ್ಥರು, ಸಿ.ಪಿ.ಸಿ.ಆರ್.ಐ ನ ನಿರ್ದೇಶಕರು, ವಿಸ್ತರಣಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ಹಾಗೂ ಆರ್ಥಿಕ ತಜ್ಞರು ಭಾಗವಹಿಸಿದ್ದರು.

02-12-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಪೂರ್ವಾಹ್ನ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಭತ್ತದ ಖರೀದಿ ವಿಚಾರದ ಬಗ್ಗ ಹಾಗೂ ಈ ಸಾಲಿನ ಬರ ಮತ್ತು ಅಧಿಕ ಮೌಲ್ಯದ ನೋಟುಗಳ ರದ್ದತಿಯ ಪರಿಣಾಮದ ಬಗ್ಗೆ ಚರ್ಚಿಸಿದ್ದರು. ಈ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ತಜ್ಞರು ಹಾಗೂ ರೈತರು ಭಾಗವಹಿಸಿದ್ದರು.

01-12-2016 ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊಫೆಸರ್ ಎಸ್. ಜಿ. ಸಿದ್ದರಾಮಯ್ಯ ರವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿ ನೀಡಿ ಅಹೋರಾತ್ರಿ ಉಪವಾಸ ಕೈಗೊಂಡಿದ್ದ ಮುಷ್ಕರ ನಿರತ ರೈತರೊಡನೆ ಸಮಾಲೋಚನೆ ನಡೆಸಿದರು.

01-12-2016 ರಂದು ಬೆಂಗಳೂರಿನ ಖನಿಷ್ಕ ಹೋಟಲ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು ಏರ್ಪಡಿಸಿದ್ದ ನೋಟು ರದ್ದತಿಯ ಪರಿಣಾಮಗಳು ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಶ್ರೀ ಕೋಡಿಹಳ್ಳಿ ಚಂದ್ರಶೇಖರ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಶ್ರೀ ವಿವೇಕ್ ಮಲ್ಯ ಮತ್ತು ಶ್ರೀಮತಿ ಯಶೋದಮ್ಮ ರವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

26-11-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಅಪರಾಹ್ನ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಇಲಾಖಾ ಅಧಿಕಾರಿಗಳು, ರೈತರು ಹಾಗೂ ವ್ಯಾಪಾರಸ್ಥರು ಇವರೊಂದಿಗೆ ಈರುಳ್ಳಿ ಬೆಂಬಲ ಬೆಲೆ ಕುರಿತು ಚರ್ಚಿಸಲಾಯಿತು. ಈ ಸಭೆಯಲ್ಲಿ ರೈತ ಪ್ರತಿನಿಧಿ ಶ್ರೀ ಹನುಮನಗೌಡ ಬೆಳಗುರ್ಕಿ ರವರು ಉಪಸ್ಥಿತರಿದ್ದರು. ಸಭೆಯಲ್ಲಿ ರೈತರ ಆದಾಯ ಮತ್ತು ಕಲ್ಯಾಣವೃಧ್ದಿ ಬಗ್ಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

26-11-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಗದಗ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳೊಂದಿಗೆ ಕೃಷಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು, ರೈತರು ಹಾಗೂ ವ್ಯಾಪಾರಸ್ಥರೊಂದಿಗೆ ಈರುಳ್ಳಿ ಬೆಂಬಲ ಬೆಲೆ ಕುರಿತು ಚರ್ಚಿಸಲಾಯಿತು. ರೈತ ಪ್ರತಿನಿಧಿ ಶ್ರೀ ಹನುಮನಗೌಡ ಬೆಳಗುರ್ಕಿ ರವರು ಉಪಸ್ಥಿತರಿದ್ದರು. ಗದಗ ಜಿಲ್ಲೆಯ ಎ.ಪಿ.ಎಂ.ಸಿ ಈರುಳ್ಳಿ ಕೇಂದ್ರಕ್ಕೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

25-11-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ, ಕೃಷಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ರೈತರ ಆದಾಯ ಮತ್ತು ಕಲ್ಯಾಣವೃಧ್ದಿ ಬಗ್ಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

09-11-2016 ರಂದು Indian Statistical Institute (ISI) Bangalore ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದೊಂದಿಗೆ ಏರ್ಪಡಿಸಿದ ಎರಡನೆ ಸ್ಟೇಕ್ ಹೊಲ್ಡರ್ಸ್ ಸಭೆಯಲ್ಲಿ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಹನುಮನ ಗೌಡ ಬೆಳಗುರ್ಕಿರವರು ಭಾಗವಹಿಸಿದ್ದರು. ಈ ಸಭೆಯಲ್ಲಿ "Climate Changa and Agricultural Yields" ಎಂಬ ವಿಷಯ ಕುರಿತು ಚರ್ಚಿಸಲಾಯಿತು.

04-11-2016 ರಂದು Indian Institute of Plantation Management (IIPM), Bangalore ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದೊಂದಿಗೆ ಏರ್ಪಡಿಸಿದ ಎರಡನೆ ಸ್ಟೇಕ್ ಹೊಲ್ಡರ್ಸ್ ಸಭೆಯಲ್ಲಿ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಧನಕುಮಾರ್, ನಿರ್ದೇಶಕರು, ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

22-10-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದೊಂದಿಗೆ ಬಳ್ಳಾರಿ ಜಿಲ್ಲೆಯಲ್ಲಿ ಏರ್ಪಡಿಸಿದ "ಈ ಸಾಲಿನ ಮುಂಗಾರು ಜೋಳವನ್ನು ಅಧಿಕ ಪ್ರಮಾಣದಲ್ಲಿ ಖರೀದಿಸಿ ಪಡಿತರದಲ್ಲಿ ವಿತರಿಸುವ ಬಗ್ಗೆ" ಒಂದು ದಿನದ ಕಾರ್ಯಗಾರವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ ರವರು ವಹಿಸಿದ್ದರು. ಈ ಕಾರ್ಯಗಾರದಲ್ಲಿ ಇಲಾಖಾ ಮುಖ್ಯಸ್ಥರು, ತಜ್ಞರು, ರೈತರು, ಸ್ವಯಂ ಸೇವಾ ಸಂಸ್ಥೆಯ ಶ್ರೀಮತಿ ವಿ. ಗಾಯತ್ರಿ ಮತ್ತು ಶ್ರೀಮತಿ ಶಾರದಾ ಗೋಪಾಲ್ ರವರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

14-10-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಸಹಯೋಗದೊಂದಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಏರ್ಪಡಿಸಿದ "ರೈತರ ಆದಾಯ ಮತ್ತು ಕಲ್ಯಾಣ ಕುರಿತು" ಒಂದು ದಿನದ ಕಾರ್ಯಗಾರವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಅಧ್ಯಕ್ಷರು, ಕೃಷಿ ಬೆಲೆ ಆಯೋಗ ರವರು ವಹಿಸಿದ್ದರು. ಈ ಕಾರ್ಯಗಾರದಲ್ಲಿ ಇಲಾಖಾ ಮುಖ್ಯಸ್ಥರು, ತಜ್ಞರು, ರೈತರು, ಮತ್ತಿತರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿಜಯ ಕರ್ನಾಟಕ ಪ್ರಕಟಣೆ

28-09-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳು, ರೈತರು, ವ್ಯಾಪಾರಸ್ಥರು ಮತ್ತು ತಜ್ಞರೊಡನೆ ಕಳೆದ ಸಾಲಿನಲ್ಲಿ ಭತ್ತದ ಬೆಲೆ ಮತ್ತು ಖರೀದಿ ವಿಚಾರಗಳನ್ನು ಚರ್ಚಿಸಿ. ಈ ಸಾಲಿನಲ್ಲಿ ಅಗತ್ಯ ಪೂರ್ವಭಾವಿ ಕ್ರಮಗಳ ಬಗ್ಗೆ ಅವಲೋಕಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

27-09-2016 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಸಾಗರ ತಾಲ್ಲೂಕಿಗೆ ಭೇಟಿ ನೀಡಿ "ಅಡಿಕೆ ಮಾರುಕಟ್ಟೆ ಮತ್ತು ಬೆಳೆ ಬಗ್ಗೆ" ರೈತರು, ಸಹಕಾರಿ ಸಂಸ್ಥೆಗಳು, ಇಲಾಖಾ ಅಧಿಕಾರಿಗಳೊಡನೆ ಸಭೆ ನಡೆಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

27-09-2016 ರಂದು ಪೂರ್ವಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ, ಸೊರಬ ತಾಲ್ಲೂಕಿನಲ್ಲಿ "ಭತ್ತದ ಕೃಷಿ ವಿಚಾರವಾಗಿ" ರೈತರು, ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳು, ತಜ್ಞರೊಡನೆ ಸಭೆ ನಡೆಸಿದರು.

23-09-2016 ರಂದು ನವದೆಹಲಿಯ ಬಾಲ ಭವನದಲ್ಲಿ ಹಮ್ಮಿಕೊಂಡಿದ್ದ "ಜಲ ಸತ್ಯಾಗ್ರಹ" ನೀರ್, ನಾರಿ, ನಾಡಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

19-09-2016 ರಂದು ಅಪರಾಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲೆಯ ಹೆಸರುಕಾಳು ಖರೀದಿ ಪ್ರಗತಿಯ ಬಗ್ಗೆ, ಸಂಬಂಧಿಸಿದ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು, ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳು, ತಜ್ಞರು ಮತ್ತಿತರರೊಡನೆ ಚರ್ಚಿಸಿದರು.

19-09-2016 ರಂದು ಪೂರ್ವಹ್ನ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬೆಳೆಗಾವಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು, ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳು, ತಜ್ಞರು ಮತ್ತಿತರರೊಡನೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೆಲೆ, ಮಾರುಕಟ್ಟೆ ಮತ್ತು ಖರೀದಿ ಬಗ್ಗೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

18-09-2016 ರಂದು ಕರ್ನಾಟಕ ಮಾಧ್ಯಮ ಅಕಾಡೆಮಿ ರವರು ದಿ. ದೇವರಾಜ ಅರಸು ಜನ್ಮ ಶತಮಾನೋತ್ಸವ ಅಂಗವಾಗಿ ಬೆಳಗಾವಿಯಲ್ಲಿ ಏರ್ಪಡಿಸಿದ "ದೇವರಾಜ ಅರಸು ಚಿಂತನೆಗಳು ಮತ್ತು ಮಾಧ್ಯಮ" ಎಂಬ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ "ಅರಸುರವರ ಜನಪರ ಯೋಜನೆಗಳು, ಇವುಗಳ ಸಮಾಜ, ಆರ್ಥಿಕತೆ ಮತ್ತು ಕೃಷಿ ಕ್ಷೇತ್ರದ ಮೇಲೆ ಉಂಟು ಮಾಡಿದ ಪರಿಣಾಮಗಳು" ಎಂಬ ವಿಷಯವನ್ನು ಮಂಡಿಸಿದರು.

13-09-2016 ರಂದು ಮಂಗಳೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಅಡಕೆ ಆಧಾರಿತ ಬೆಳೆ ಪದ್ದತಿ ಕೈಗೊಳ್ಳುತ್ತಿರುವ ರೈತರಿಗೆ ಸ್ಥಿರವಾದ ಆದಾಯ ದೊರಕಿಸಲು ಪೂರ್ವಭಾವಿ ಸಭೆಯಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು, ತಜ್ಞರು, ಕ್ಯಾಂಪ್ಕೋ ಸಂಸ್ಥೆ, ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ, ಸಾಂಬಾರು ಮಂಡಳಿ, ಸಹಕಾರಿ ಸಂಸ್ಥೆಗಳು ಮತ್ತಿತರರು ಭಾಗವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

10-09-2016 ರಂದು ಕಾಸರಗೋಡಿನ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ (Central Plantation Crops Research Institute) ರವರು ಹಮ್ಮಿಕೊಂಡ ಕಾರ್ಯಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ "Coconut Based Business Venture's" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು. ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಪಿ. ಚೌಡಪ್ಪ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

30-08-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಾಗಲಕೋಟೆ ಇವರ ಸಹಯೋಗದೊಂದಿಗೆ ಸ್ಟೇಕ್ ಹೊಲ್ಡರ್ಸ್ ಸಭೆ ಏರ್ಪಡಿಸಲಾಗಿತ್ತು. ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಸಭೆಯನ್ನು ಉದ್ಘಾಟಿಸಿದರು. ಶ್ರೀ ಹನುಮನಗೌಡ ಬೆಳಗುರ್ಕಿ, ಸದಸ್ಯರು, ಕೃಷಿ ಬೆಲೆ ಆಯೋಗ ಮತ್ತು ಡಾ.ವಿ. ನಾಚೇಗೌಡ, ಸಂಶೋಧನಾ ನಿರ್ದೇಶಕರು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಾಗಲಕೋಟೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ತೋಟಗಾರಿಕಾ ಬೆಳೆಗಳ ಪೂರೈಕೆ ಹಾಗೂ ಬೇಡಿಕೆಯ ಆರ್ಥಿಕ ವಿಶ್ಲೇಷಣೆಯ ಕುರಿತು ವಿವಿಧ ಪಾಲುದಾರರೊಂದಿಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

20-08-2016 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಜಿಲ್ಲೆಯ ಭತ್ತ, ಅಡಿಕೆ ಮತ್ತು ತೆಂಗು ಬೆಳೆಗಳ ಧಾರಣೆ, ಖರೀದಿ, ಮಾರುಕಟ್ಟೆ ವಿಚಾರವಾಗಿ ಸಂಬಂದಿಸಿದ ಇಲಾಖಾ ಅಧಿಕಾರಿಗಳು, ತಜ್ಞರು, ಸಹಕಾರಿ ಸಂಸ್ಥೆಗಳು ಮತ್ತಿತರರೊಡನೆ ಚರ್ಚಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಉದಯವಾಣಿ ಪ್ರಕಟಣೆ

19-08-2016 ರಂದು ಮಂಗಳೂರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ಜಿಲ್ಲೆಯ ಭತ್ತ, ಅಡಿಕೆ ಮತ್ತು ತೆಂಗು ಬೆಳೆಗಳ ಧಾರಣೆ, ಖರೀದಿ, ಮಾರುಕಟ್ಟೆ ವಿಚಾರವಾಗಿ ಸಂಬಂದಿಸಿದ ಇಲಾಖಾ ಅಧಿಕಾರಿಗಳು, ತಜ್ಞರು, ಸಹಕಾರಿ ಸಂಸ್ಥೆಗಳು ಮತ್ತಿತರರೊಡನೆ ಚರ್ಚಿಸಿದರು.

19-08-2016 ರಂದು ಕಾಸರಗೋಡಿನ ತೋಟದ ಬೆಳೆಗಳ ಸಂಶೋಧನಾ ಕೇಂದ್ರ (CPCRI) ರವರು ಹಮ್ಮಿಕೊಂಡ ಒಂದು ದಿನದ ಕಾರ್ಯಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಅಡಿಕೆ ಮಾರುಕಟ್ಟೆ ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು, ಸಭೆಯ ಅಧ್ಯಕ್ಷತೆಯನ್ನು ತೋಟದ ಬೆಳೆಗಳ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಶ್ರೀ ಪಿ. ಚೌಡಪ್ಪ ರವರು ವಹಿಸಿದ್ದರು.

10-08-2016 ರಂದು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ಇವರ ಸಹಯೋಗದೊಂದಿಗೆ "ರೈತರ ಆದಾಯ ಮತ್ತು ಕಲ್ಯಾಣದ ಬಗ್ಗೆ" ಸಭೆಯನ್ನು ನಡೆಸಲಾಯಿತು. ಇದರ ಅಧ್ಯಕ್ಷತೆಯನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ರವರು ವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

29-07-2016 ರಂದು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಕೃಷಿ ಬೆಲೆ ಆಯೋಗ, ಕರ್ನಾಟಕ ಸರ್ಕಾರ, ಇವರ ಸಹಯೋಗದೊಂದಿಗೆ ಏರ್ಪಡಿಸಿದ "ಸ್ಟೇಕ್ ಹೋಲ್ಡರ್ಸ್" ಸಭೆಯನ್ನು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಜಿ.ಕೆ.ವಿರೇಶ್, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರು ಭಾಗವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಡಾ. ಡಿ.ಪಿ.ಕುಮಾರ್, ಶಿಕ್ಷಣ ನಿರ್ದೇಶಕರು, ಡಾ. ಎನ್.ಆರ್. ಗಂಗಾಧರಪ್ಪ, ಸಂಶೋಧನಾ ನಿರ್ದೇಶಕರು, ಡಾ. ಹೆಚ್. ಖಾದರ್ ಖಾನ್, ಡೀನ್ (ಕೃಷಿ) ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಮತ್ತು ಡಾ. ಎಮ್. ಜಿ. ಚಂದ್ರಕಾಂತ್, ನಿರ್ದೇಶಕರು, ಸಾಮಾಜಿಕ ಮತ್ತು ಆರ್ಥಿಕ ಪರಿರ್ವತನೆಯ ಸಂಸ್ಥೆ, ಬೆಂಗಳೂರು ರವರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಡಾ. ಹೆಚ್. ಶಿವಣ್ಣ, ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ರವರು ವಹಿಸಿದ್ದರು. ಈ ಸಭೆಯಲ್ಲಿ "ಸಾವಯವ ಕೃಷಿ ಪದಾರ್ಥಗಳ ಬೆಲೆ ನಿಗದಿ ಮತ್ತು ಮಾರಾಟ" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

20-07-2016 ರಂದು ಫೊರ್ ಟೆಲ್ ಬಿಸಿನೆಸ್ ಸೊಲ್ಯೂಷನ್ ರವರು ಏರ್ಪಡಿಸಿದ ಸ್ಟೇಕ್ ಹೋಲ್ಡರ್ಸ್ ಕಾರ್ಯಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು, ಈ ಸಭೆಯಲ್ಲಿ "Public Private Partneship for Integrated Agricultural Development (PPPIAD) for important Agricultural Commodities in Karnataka" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಡಾ.ಶ್ರೀಧರ್ ಅಡಿಗ, ಸಹಾಯಕ ಕೃಷಿ ನಿರ್ದೇಶಕರು ಮತ್ತು ಡಾ. ಹೆಚ್. ಚಂದ್ರಶೇಖರ್, ಡಾ.ಕೆ. ಜೆ. ಪರಮೇಶ್ವರಪ್ಪ, ತಾಂತ್ರಿಕ ಸಲಹೆಗಾರರು ಹಾಗೂ ತಾಂತ್ರಿಕ ಸಹಾಯಕರು, ಕೃಷಿ ಬೆಲೆ ಆಯೋಗ ರವರು ಭಾಗವಹಿಸಿದ್ದರು.

18-07-2016 ರಂದು ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ ಸ್ಟೇಕ್ ಹೋಲ್ಡರ್ಸ್ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮತ್ತು ಡಾ. ಡಿ.ಪಿ. ಬಿರಾದಾರ, ಮಾನ್ಯ ಕುಲಪತಿಗಳು, ಕೃ.ವಿ.ವಿ. ಧಾರವಾಡ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಗೌರವಾನ್ವಿತ ಅತಿಥಿಗಳಾಗಿ ಶ್ರೀ ಹನುಮನ ಗೌಡ ಬೆಳಗುರ್ಕಿ, ರೈತರ ಪ್ರತಿನಿಧಿ, ಕೃಷಿ ಬೆಲೆ ಆಯೋಗ, ಬೆಂಗಳೂರು. ಡಾ.ಬಿ.ಎಸ್. ಜನಗೌಡರ, ಶಿಕ್ಷಣ ನಿರ್ದೇಶಕರು ಕೃ.ವಿ.ವಿ. ಧಾರವಾಡ ರವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಉತ್ತರ ಕರ್ನಾಟಕ ಕೃಷಿ ಬೆಳೆಗಳ ಉತ್ಪಾದನಾ ವೆಚ್ಚ, ಮಾರುಕಟ್ಟೆ ಜ್ಞಾನ, ಕನಿಷ್ಟ ಬೆಂಬಲ ಬೆಲೆ ಮತ್ತು ಕೃಷಿ ಉತ್ಪನ್ನಗಳ ಅಡಮಾನ ಸಾಲ ಯೋಜನೆ ಕುರಿತು ಚರ್ಚಿಸಲಾಯಿತು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

16-07-2016 ರಂದು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು ಇವರ ಸಹಯೋಗದೊಂದಿಗೆ ಏರ್ಪಡಿಸಿದ ಸ್ಟೇಕ್ ಹೋಲ್ಡರ್ಸ್ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಭೆಯಲ್ಲಿ ಶ್ರೀ ಹನುಮನ ಗೌಡ ಬೆಳಗುರ್ಕಿ ( ರೈತರ ಪ್ರತಿನಿಧಿ ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಗಳೂರು ) ಭಾಗವಹಿಸಿದ್ದರು. ಈ ಸಭೆಯಲ್ಲಿ "Pricing and Marketing of Important Agricultural Crop Seeds of Karnataka" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.

08-07-2016 ರಂದು ಜಾಗೃತಿ ಸಂಸ್ಥೆಯವರು ಏರ್ಪಡಿಸಿದ (ಕೃಷಿ ವಿಶ್ವವಿದ್ಯಾನಿಲಯದ ಆವರಣ ಧಾರವಾಡ) ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ "ಆಹಾರದ ಹಕ್ಕಿಗಾಗಿ ಆಂದೋಲನ" ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಭಾಗವಹಿಸಿ "ಅಗ್ರಿ ಇಕನಾಮಿಕ್ಸ್" ಎಂಬ ವಿಷಯವನ್ನು ಮಂಡಿಸಿದರು.

05-07-2016 ರಂದು ರಾಜ್ಯ ಕಬ್ಬು ಬೆಳೆಗಾರರ ಸಂಘ (ರಿ) ಕರ್ನಾಟಕ (ಮೈಸೂರು) ರವರು ಏರ್ಪಡಿಸಿದ ರಾಜ್ಯ ಮಟ್ಟದ ರೈತರ ಸಮಾವೇಶದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶ್ರೀ ಕುರುಬೂರ್ ಶಾಂತಕುಮಾರ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀ ಅಮಿತಾಬ್ ಕಾಂತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ನೀತಿ ಆಯೋಗ, ಕೇಂದ್ರ ಸರ್ಕಾರ ನವದೆಹಲಿ ಇವರು ಉದ್ಘಾಟಿಸಿದರು. ಕೃಷಿ ವಿಮೆ ವ್ಯಾಪ್ತಿಗೆ ಮತ್ತು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ಕಬ್ಬು ಬೆಳೆಯನ್ನು ತರಲಾಗುವುದು ಎಂದು ಕೇಂದ್ರ ಸರ್ಕಾರದ ನೀತಿ ಆಯೋಗದ ಮುಖ್ಯನಿರ್ವಾಹಣಾಧಿಕಾರಿ ಶ್ರೀ ಅಮಿತಾಬ್ ಕಾಂತ್ ರವರು ಭರವಸೆ ನೀಡಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ ಮತ್ತು ಉದಯವಾಣಿ ಪ್ರಕಟಣೆ

29-06-2016 ರಂದು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ರವರು ಏರ್ಪಡಿಸಿದ "10th National Statistical Day Celebrations" ನಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

28-06-2016 ರಂದು ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (Indian Institute of Horticultural Research) ರವರು ಹಮ್ಮಿಕೊಂಡ ರಾಜ್ಯ ಮಟ್ಟದ ಸ್ಟೇಕ್ ಹೋಲ್ದರ್ಸ್ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

05-06-2016 ರಂದು ತೀರ್ಥಹಳ್ಳಿ ಯಲ್ಲಿ ರೈತರು ಮತ್ತು ಗಣ್ಯರೊಡನೆ ಕೃಷಿ ಪ್ರವಾಸೋಧ್ಯಮದ ಬಗ್ಗೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಉದಯವಾಣಿ ಪ್ರಕಟಣೆ

04-06-2016 ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ಇವರ ಸಹಯೋಗದೊಂದಿಗೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ (Cost of Cultivation Market Intelligence Cell) ದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ಡಾ.ಸಿ. ವಾಸುದೇವಪ್ಪ, ಕುಲಪತಿಗಳು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ರವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಹನುಮನ ಗೌಡ ಬೆಳಗುರ್ಕಿ ರೈತರ ಪ್ರತಿನಿಧಿ ಮತ್ತು ಸದಸ್ಯರು ಕರ್ನಾಟಕ ಕೃಷಿ ಬೆಲೆ ಆಯೋಗ ಬೆಂಗಳೂರು, ಡಾ.ಎಂ.ಕೆ. ನಾಯ್ಕ್, ಸಂಶೋಧನಾ ನಿರ್ದೇಶಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ಡಾ.ಎಂ. ಮಂಜುನಾಥ, ಡೀನ್ (ಕೃಷಿ), ಕೃಷಿ ಮಹಾವಿಶ್ವವಿದ್ಯಾನಿಲಯ ಶಿವಮೊಗ್ಗ, ಡಾ.ಟಿ. ಹೆಚ್. ಗೌಡ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ಡಾ.ಕೆ. ಮಧುಸೂಧನ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಶಿವಮೊಗ್ಗ, ಡಾ.ಎಂ. ವಿಶ್ವನಾಥ್, ಉಪ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ, ಶ್ರೀ ಸಿ. ಪಾತಲಿಂಗಪ್ಪ ಕಾರ್ಯದರ್ಶಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ, ಮುಂತಾದವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.

ಭತ್ತ ಮತ್ತು ಅಡಿಕೆ ಕೃಷಿ ವಿಚಾರವಾಗಿ ರೈತರು, ಗಣ್ಯರು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು, ತಜ್ಞರು ಮತ್ತಿತರರೊಡನೆ ಚರ್ಚಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

31-05-2016 ರಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್) ರವರು ಹಮ್ಮಿಕೊಂಡ "ಕರ್ನಾಟಕ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆಯನ್ನು ಸಧೃಡಗೊಳಿಸುವ ಬಗ್ಗೆ" ಒಂದು ದಿನದ ಕಾರ್ಯಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಐಸೆಕ್ ಸಂಸ್ಥೆಯ ಅಧ್ಯಕ್ಷರಾದ ಡಾ॥ಎ. ರವೀಂದ್ರ ರವರು ವಹಿಸಿದ್ದರು. ಈ ಕಾರ್ಯಗಾರದಲ್ಲಿ ತಜ್ಞರುಗಳಿಂದ ಬೆಳೆ ವಿಮೆ ಪ್ರಸ್ತಾವನೆಯ ಬಗ್ಗೆ ಚರ್ಚೆ ಮಾಡಲಾಯಿತು. ತಾಂತ್ರಿಕ ಅಧಿವೇಶನದ ಅಧ್ಯಕ್ಷತೆಯನ್ನು ಐಸೆಕ್ ಸಂಸ್ಥೆಯ ನಿರ್ದೇಶಕರಾದ ಪ್ರೊಫೆಸರ್ ಎಂ. ಜಿ. ಚಂದ್ರಕಾಂತ್ ರವರು ವಹಿಸಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿಜಯ ಕರ್ನಾಟಕ ಪ್ರಕಟಣೆ

28-05-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಎಪಿಎಂಸಿಗೆ ಬೇಟಿ ನೀಡಿ, "ಕೊಬ್ಬರಿಗೆ ಆನ್ ಲೈನ್ ಟ್ರೇಡಿಂಗ್" ವಿಷಯದ ಬಗ್ಗೆ ಹಿಂದಿನ ಎಪಿಎಂಸಿ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಾಗೂ ರೈತರೊಡನೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಡಾ.ಎಸ್. ಜಿ.ಸಿದ್ದರಾಮಯ್ಯ, ಪ್ರೋಪೆಸರ್ ಹಾಗೂ ಮತ್ತಿತರರು ಭಾಗವಹಿಸಿದ್ದರು. ತದನಂತರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳು, ರೈತರು ಮತ್ತಿತರರೊಡನೆ "ಕೊಬ್ಬರಿಗೆ ಆನ್ ಲೈನ್ ಟ್ರೇಡಿಂಗ್" ವಿಷಯದ ಬಗ್ಗೆ ವಿವರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

19-05-2016 ರಂದು Center for Multi-Disciplinaary Development Research(ಸಿಎಂಡಿಆರ್) ರವರು ಏರ್ಪಡಿಸಿದ ರಾಜ್ಯ ಮಟ್ಟದ ಸ್ಟೇಕ್ ಹೋಲ್ಡರ್ಸ್ ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪ್ರೋ ಆರ್.ವಿ.ದಾಡಿಬಾವಿ ಸಭೆಯ ಅಧ್ಯಕ್ಷತೆ ವಹಿಸಿದರು, "ಬೆಳೆ ವಿಮೆ ಯೋಜನೆ" ಕುರಿತು ಕೃಷಿ, ತೋಟಗಾರಿಕೆ, ಮಾರುಕಟ್ಟೆ ಮತ್ತು ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

18-05-2016 ರಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಧಾರವಾಡದ ಕೃಷಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರದ "Cost of Cultivation and Market Intelligence Cell" ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕರು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

14-05-2016 ರಂದು ಹಿರಿಯ ಪಶು ವೈದ್ಯರ ಸಂಘ ಕರ್ನಾಟಕ ರವರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ "ಪಶುಪಾಲನೆ ಮತ್ತು ರೈತರ ಆದಾಯ" ವಿಚಾರದ ಬಗ್ಗೆ ಚರ್ಚಿಸಲಾಯಿತು.

07-05-2016 ರಂದು ಕೃಷಿ ತಂತ್ರಜ್ಞರ ಸಂಸ್ಥೆ,(IAT) ಬೆಂಗಳೂರು. ಕರ್ನಾಟಕ ರಾಜ್ಯ ಕೃಷಿ ಇಲಾಖೆ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ " ಸುಸ್ಥಿರ ಕೃಷಿಗಾಗಿ ಕಡಿಮೆ ವೆಚ್ಚದ ತಾಂತ್ರಿಕತೆಗಳು" ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಾನ್ಯ ಕೃಷಿ ರಾಜ್ಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ರವರು ಉದ್ಘಾಟಿಸಿದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೃಷಿ ತಂತ್ರಜ್ಞರ ಅಧ್ಯಕ್ಷರಾದ ಡಾ.ಎಂ. ಮಲ್ಲಪ್ಪ ರವರು ಅಧ್ಯಕ್ಷತೆ ವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಕೃಷಿ ಬೆಲೆ ಆಯೋಗದ ತಾಂತ್ರಿಕ ಸಲಹೆಗಾರದ ಡಾ.ಎಚ್.ಚಂದ್ರಶೇಖರ್ ರವರು "ಸುಸ್ಥಿರ ಕೃಷಿಗೆ ಕಡಿಮೆ ವೆಚ್ಚದ ಹಾಗೂ ವೆಚ್ಚವಿಲ್ಲದ ತಾಂತ್ರಿಕತೆಯ ಉಪಯೋಗದ ಮಹತ್ವ" ಎಂಬ ವಿಷಯದ ಕುರಿತು ಪ್ರಬಂಧವನ್ನು ಮಂಡಿಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

02-05-2016 ರಂದು "National Bureau of Soil Survey and Land Use Planning, Regional Center ರವರು ಹಮ್ಮಿಕೊಂಡ ರಾಜ್ಯ ಮಟ್ಟದ ಸ್ಟೇಕ್ ಹೋಲ್ಡರ್ಸ್ ಕಾರ್ಯಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಗಾರದಲ್ಲಿ "Land Suitability Mapping for Optimum Crop Plan Based On Food Security Requirement of Karnataka" ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

30-04-2016 ರಂದು ಮೈರಾ ಸಂಸ್ಥೆ, ಮೈಸೂರು ರವರು ಏರ್ಪಡಿಸಿದ "ಸ್ಟೇಕ್ ಹೋಲ್ಡರ್ಸ್" ಕಾರ್ಯಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಹಾಗೂ ಈ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೇಸಾಯ, ಮಾರುಕಟ್ಟೆ ಮತ್ತು ಖರೀದಿ ವಿಚಾರಗಳನ್ನು ಸಂಬಂಧಿಸಿದ ಕೃಷಿ, ತೋಟಗಾರಿಕೆ, ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳು, ತಜ್ಞರು ಮತ್ತು ರೈತರೊಡನೆ ಚರ್ಚಿಸಿದರು.
ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

25-04-2016 ರಂದು Indian Stastical Institute ರವರು ಏರ್ಪಡಿಸಿದ "ಸ್ಟೇಕ್ ಹೋಲ್ಡರ್ಸ್" ಕಾರ್ಯಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಮತ್ತು "Climate Change and Agricultural Yield in Karnataka" ಎಂಬ ವಿಷಯದ ಬಗ್ಗೆ ಚರ್ಚಿಸಿದರು.

22-04-2016 ರಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ ಎಪಿಎಂಸಿ ಪ್ರಾಂಗಣಕ್ಕೆ ಖುದ್ದಾಗಿ ಭೇಟಿ ನೀಡಿ ೨೦೧೫-೧೬ ನೇ ಸಾಲಿನ ಮೆಣಸಿನಕಾಯಿ ಖರೀದಿ ಪ್ರಕ್ರಿಯೆಯನ್ನು ಪರಿಶೀಲಿಸಿದರು ಮತ್ತು ಸಂಬಂಧಿಸಿದ ಅಧಿಕಾರಿಗಳು, ರೈತರು ಮತ್ತಿತರರೊಡನೆ ಸಭೆ ನಡೆಸಿದರು. ಈ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ್ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ . ಎಸ್. ವಿಜಯಲಕ್ಷ್ಮಿ , ಸಹಾಯಕ ಕೃಷಿ ನಿರ್ದೇಶಕರಾದ ಶಿವಕುಮಾರ ಮಲ್ಲಾಡದ, ಎಪಿಎಂಸಿ ಅಧ್ಯಕ್ಷ ಎಸ್. ಸಿ. ಶಿಡೇನೂರ, ಕಾರ್ಯದರ್ಶಿ ಟಿ.ಎ. ಸತೀಶ, ಸಹಾಯಕ ಕಾರ್ಯದರ್ಶಿ ಗೌಡರ ಹಾಗೂ ಪ್ರಭು ದೊಡ್ಮನಿ ಉಪಸ್ಥಿತರಿದ್ದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಮತ್ತು Deccan Herald ಪ್ರಕಟಣೆ

13-04-2016 ರಂದು ಕೃಷಿ ಬೆಲೆ ಆಯೋಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಅಲುಮಿನಿ ಅಸೋಷಿಯೇಷನ್ ಬೆಂಗಳೂರು ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಸಧೃಡ ಮಾರುಕಟ್ಟೆ ಮತ್ತು ಲಾಭದಾಯಕ್ ಬೆಲೆಯನ್ನು ಒದಗಿಸುವ ಬಗ್ಗೆ ಒಂದು ದಿನದ ದುಂಡು ಮೇಜಿನ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮಾತನಾಡುತ್ತ "ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವ ಅಧಿಕಾರ ಕೇಂದ್ರ ಸರ್ಕಾರದ್ದು. ಆದುದರಿಂದ ಈ ವಿಚಾರದಲ್ಲಿ ಧಾರಾಳತನ ತೋರಿಸಬೇಕು. ಅದನ್ನು ರಾಜ್ಯ ಸರ್ಕಾರ ಸರಿಯಾಗಿ ಅನುಷ್ಠಾನಕ್ಕೆ ತರಲು ಖರೀದಿ ವ್ಯವಸ್ಥೆ ಮಾಡಬೇಕು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
- ಪ್ರಜಾವಾಣಿ ಪ್ರಕಟಣೆ

11-04-2016 ರಂದು ಬೆಂಗಳೂರಿನಲ್ಲಿ ನಡೆದ ಡಿ.ಡಿ. ಭರಮಗೌಡ್ರ ಅವರ "ಬದುಕು-ಬೇಸಾಯ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬೆಳೆ ಬೆಳೆಯಲು ಮಾಡಿದ ಖರ್ಚಿಗಿಂತಲೂ ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಮಾರಟ ಮಾಡುವ ಹಕ್ಕು ರೈತರಿಗೆ ಅಗತ್ಯವಾಗಿ ಸಿಗಬೇಕು ಮತ್ತು ರೈತರ ನ್ಯಾಯಯುತ ಬೆಲೆ ಕೃಷಿಕರ ಹಕ್ಕಾಗಲಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. - ವಿವಿಧ ಪತ್ರಿಕೆಗಳ ಪ್ರಕಟಣೆ

07-04-2016 ರಂದು ನವದೆಹಲಿಯ ಕೃಷಿ ಇಲಾಖೆ "Department of Agriculture and Cooperation" ಮತ್ತು South Asian Dialogues on Ecological Democracy ಇವರು ಏರ್ಪಡಿಸಿದ ಚರ್ಚೆಯಲ್ಲಿ Key Note Lecture on "Agriculture Crisis - A Futuristic Perspective" ಎಂಬ ವಿಷಯದ ಬಗ್ಗೆ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

02-04-2016 ರಂದು ಕೃಷಿ ಬೆಲೆ ಆಯೋಗ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಬಾಗಲಕೋಟೆ ಇವರ ಸಹಯೋಗದೊಂದಿಗೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ (Cost of Cultivation Market Intelligence Cell) ದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಸಭೆಗೆ ತಿಳಿಸಿದರು.
- ವಿವಿಧ ಪತ್ರಿಕೆಗಳ ಪ್ರಕಟಣೆ

30-03-2016 ರಂದು ಫೊರ್ ಟೆಲ್ ಬಿಸಿನೆಸ್ ಸಲ್ಯೂಷನ್ ರವರು ಏರ್ಪಡಿಸಿದ "ಸ್ಟೇಕ್ ಹೋಲ್ಡರ್ಸ್" ಕಾರ್ಯಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

23-03-2016 ರಂದು ರಾಯಚೂರಿನಲ್ಲಿ ನಡೆದ ಕೃಷಿ ಬೆಲೆ ಆಯೋಗ ಮತ್ತು ಕೃಷಿ ವಿಶ್ವವಿದ್ಯಾನಿಲಯ, ರಾಯಚೂರು ಇವರ ಸಹಯೋಗದೊಂದಿಗೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ (Cost of Cultivation Market Intelligence Cell) ದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು. - ವಿವಿಧ ಪತ್ರಿಕೆಗಳ ಪ್ರಕಟಣೆ

14-03-2016 ರಂದು ಕೃಷಿ ಬೆಲೆ ಆಯೋಗ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ ಇವರ ಸಹಯೋಗದೊಂದಿಗೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ (Cost of Cultivation Market Intelligence Cell) ದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.

11-03-2016 ರಂದು Indian Institute of Plantation Management (IIPM) ಮಲ್ಲತ್ತ್ ಹಳ್ಳಿ, ಬೆಂಗಳೂರು ರವರು ಏರ್ಪಡಿಸಿದ "ಸ್ಟೇಕ್ ಹೋಲ್ಡರ್ಸ್" ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

09-03-2016 ರಂದು ಶಿವಮೊಗ್ಗ ಜಿಲ್ಲೆಯ ೨೦೧೫-೧೬ ನೇ ಸಾಲಿನ ಭತ್ತ ಖರೀದಿ ಪ್ರಗತಿಯನ್ನು ಖುದ್ದಾಗಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಪರಿಶೀಲಿಸಿದರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳು, ರೈತರು ಮತ್ತಿತರರೊಡನೆ ಸಭೆ ನಡೆಸಿದರು.

08-03-2016 ರಂದು ಮಳೆ ಆಶ್ರಿತ ಭತ್ತ ಕೃಷಿ ಸದೃಢಗೊಳಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿಯ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರು, ರೈತರು, ತಜ್ಞರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಮಳೆ ಆಶ್ರಿತ ಭತ್ತ ಕೃಷಿ ಕುರಿತು ಚರ್ಚಿಸಲಾಯಿತು.

02-03-2016 ರಂದು ಕೃಷಿ ಬೆಲೆ ಆಯೋಗ ಮತ್ತು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ (Cost of Cultivation Market Intelligence Cell) ದ ಉದ್ಟಾಟನಾ ಸಮಾರಂಭದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.

01-03-2016 ರಂದು ಕೃಷಿ ಬೆಲೆ ಆಯೋಗ ಮತ್ತು ನಬಾರ್ಡ್ ಸಹಯೋಗದೊಂದಿಗೆ ರೈತರ ಉತ್ಪಾದಕ ಸಂಘಟನೆಗಳನ್ನು ಯೋಜಿಸುವ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. - ಸಭೆಯ ನಡವಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

27-02-2016 ರಂದು ರಾಮನಗರ ಜಿಲ್ಲೆಯ ೨೦೧೫-೧೬ನೇ ಸಾಲಿನ ರಾಗಿ ಖರೀದಿ ಪ್ರಗತಿಯನ್ನು ಖುದ್ದಾಗಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಪರಿಶೀಲಿಸಿದರು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳು, ರೈತರು ಮತ್ತಿತರರೊಡನೆ ಸಭೆ ನಡೆಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

15-02-2016 ಪ್ರಸಾರ ಭಾರತಿ, ಮೈಸೂರು ಇವರು ರೇಡಿಯೋ ಕಿಸಾನ ದಿವಸದಂದು ಆಯೋಜಿಸಿದ "ಕೃಷಿ ಹಣಕಾಸು ನಿರ್ವಹಣೆ" ಕುರಿತ ಕಾರ್ಯಾಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಭಾಗವಹಿಸಿದ್ದರು ಮತ್ತು ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಭತ್ತ ಹಾಗೂ ರಾಗಿಯನ್ನು ಕನಿಷ್ಟ ದರದಲ್ಲಿ ಖರೀದಿಯ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಕೃಷಿ ಮಾರುಗಟ್ಟೆ ಪ್ರಾಂಗಣ, ಶ್ರೀರಂಗಪಟ್ಟಣದಲ್ಲಿ ಭತ್ತದ ಖರೀದಿಯ ಖುದ್ದು ಪರಿಶೀಲನೆ ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಭತ್ತದ ಖರೀದಿ ಕುರಿತು ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಚರ್ಚಿಸಿದರು. ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

09-02-2016 ರಂದು ಆಯೋಗದ ೯ನೇ ಮಾಸಿಕ ಸಭೆಯನ್ನು ಆಯೋಜಿಸಲಾಗಿತ್ತು.

05-02-2016 - ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಮಳೆಯಾಶ್ರಿತ ಕೃಷಿ ಕುರಿತ ಸಭೆಯಲ್ಲಿ ರೈತರು, ಅಧಿಕಾರಿಗಳು, ತಜ್ಣರು ಎನ್ ಜಿ ಓ ಹಾಗೂ ಮತ್ತಿತರರೊಡನೆ ಮಳೆಯಾಶ್ರಿತ ಕೃಷಿಯನ್ನು ಸಧೃಡಗೊಳಿಸುವ ಬಗ್ಗೆ ಚರ್ಚಿಸಲಾಯಿತು.

04-02-2016 ರಂದು ಶ್ರೀ ಪುರುಶೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ಇವರು ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಭಾಗವಹಿಸಿದ್ದರು.

27-01-2016 - ಭುವನೇಶ್ವರದಲ್ಲಿ ನಡೆದ ಒಂದು ದಿನದ "Consultation meeting for developing a comprehensive programme to revive millets in household consumption and farming systems" ಬಗ್ಗೆ ನಡೆದ ಸಭೆಯಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿನ ಅನುಭವವನ್ನು ಮಂಡಿಸಿದರು.

22-01-2016 - Madras Institute of Development Studies Chennai ರವರು ಏರ್ಪಡಿಸಿದ "Prospects for agriculture in India's Southern Region" ಎಂಬ ವಿಷಯ ಕುರಿತ ನಡೆದ ಕಾರ್ಯಾಗಾರದಲ್ಲಿ ಕೃಷಿ ಬೆಲೆ ಆಯೋಗಾದ ಅಧ್ಯಕ್ಷರು ಭಾಗವಹಿಸಿದ್ದರು.

18-01-2016 - ರಬ್ಬರ್ ಬೆಳೆಗಾರರ ಸಮಸ್ಯೆ ಕುರಿತು ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲಾಯಿತು ಮತ್ತು ಮಳೆಯಾಶ್ರಿತ ಭತ್ತ ಮತ್ತು ಅಡಿಕೆ ಮಂಡಳಿ ಸ್ಥಾಪನೆ ಕುರಿತು ಜಿಲ್ಲಾಧಿಕಾರಿಗಳು, ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಸಭೆಯಲ್ಲಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರಬ್ಬರ್ ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಪರಿಹಾರ ಪ್ಯಾಕೇಜ್ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಯಿತು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ಪ್ರಜಾವಾಣಿ ಪ್ರಕಟಣೆ

16-01-2016 - ನ್ಯಾಷನಲ್ ಲಾ ಸ್ಕೂಲ್ ಹಾಗೂ ಕೃಷಿ ಬೆಲೆ ಆಯೋಗದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಚೌಕಟ್ಟು ಒದಗಿಸುವ ಬಗ್ಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಕೃಷಿ ಉತ್ಪನ್ನಗಳ ಬೆಲೆಗಳಿಗೆ ಶಾಸನಬದ್ಧವಾದ ರೂಪವನ್ನು ಕೊಡುವ ಬಗ್ಗೆ ಚರ್ಚಿಸಲಾಯಿತು. ಈ ವಿಚಾರದ ಬಗ್ಗೆ ನ್ಯಾಷನಲ್ ಲಾ ಸ್ಕೂಲ್ ರವರು ಒಂದು ಅಧ್ಯಯನವನ್ನು ತೆಗೆದುಕೊಂಡಿರುತ್ತಾರೆ. ಆ ಅಧ್ಯಯನದ ರೂಪರೇಷೆಗಳನ್ನು ಸಹ ವಿವರವಾಗಿ ಚರ್ಚಿಸಲಾಯಿತು. ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

12-01-2016 ರಂದು ಧಾರವಾಡ ಡಿ ಎ ಟಿ ಸಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಬೆಲೆ ಆಯೋಗದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ಹತ್ತಿ ಕಾರ್ಯಾಗಾರದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಸ್ತುತ ಹತ್ತಿ ಮಾರುಕಟ್ಟೆಯ ಬಗ್ಗೆ ಹಾಗೂ Cotton Corporation of India ಇವರ ಮೂಲಕ ಹತ್ತಿಯನ್ನು ಖರೀದಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.

07-01-2016 ರಂದು ನವದೆಹಲಿಯ Lok Sabha Secretariat ನ Standing Committee on Finance Branch ಹಮ್ಮಿಕೊಂಡ Examination of the subject "State of Rural / Agricultural Banking including Crop Insurance" ಸಮಿತಿಯ ಮುಂದೆ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿನ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯವನ್ನು ಮಂಡಿಸಿರುತ್ತಾರೆ. ಪೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

24-10-2015 - ಸಕಲೇಶಪುರ ಜಿಲ್ಲಾ ಪ್ಲಾಂಟರ್ಸ್ ಸಂಘದ ಸಭಾಂಗಣದಲ್ಲಿ ಮಳೆಯಾಶ್ರಿತ ಭತ್ತದ ಬೇಸಾಯ ಹಾಗೂ ಬೆಳೆಹಾನಿ ಕುರಿತಂತೆ ರೈತರು, ಅಧಿಕಾರಿಗಳು ಮತ್ತು ತಜ್ಞರೊಂದಿಗೆ ನಡೆದ ಸಂವಾದದಲ್ಲಿ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿಯವರು ಪಾಲ್ಗೊಂಡಿದ್ದರು.- ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

15-10-2015 - ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ- ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

04-10-2015 - ಚಿಕ್ಕಮಗಳೂರು - ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಅಡಕೆ, ಭತ್ತ, ರಾಗಿ ಮತ್ತಿತರ ಬೆಳೆಗಳ ಕೃಷಿ ಮಾರಾಟ ಖರೀದಿ ಇತ್ಯಾದಿಗಳ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು, ತಜ್ಣರು, ವಿಜ್ಞಾನಿಗಳು, ಜಿಲ್ಲಾ ಬ್ಯಾಂಕ್ ಮತ್ತು ನಬಾರ್ಡ್ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳ ಸಭೆ.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - ವಿವಿಧ ಪತ್ರಿಕೆಗಳ ಪ್ರಕಟಣೆ

29-08-2015 - ಶಿವಮೊಗ್ಗದಲ್ಲಿ ಅಡಿಕೆ ಬೆಳೆಗಾರರು ಮತ್ತು ವರ್ತಕರ ಜೊತೆ ಚರ್ಚೆ.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - (1) ಪ್ರಜಾವಾಣಿ ಪ್ರಕಟಣೆ (2) New Indian Express

22-08-2015 - ಕೋಲಾರ ನಗರದ ಜಿ.ಪಂ. ಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಹಾಗೂ ಟೊಮೆಟೊ ಬೆಲೆ ಕುಸಿತದ ಸಂಬಂಧ ವಿಶ್ಲೇಷಣೆ ಮಾಡಲು ತಾಲ್ಲೂಕು ಎಪಿಎಂಸಿ ಗೆ ಭೇಟಿ ನೀಡಿ ವಿವಿಧ ಅಧಿಕಾರಿಗಳು, ರೈತರು ಹಾಗೂ ವರ್ತಕರೊಂದಿಗೆ ಸಭೆ ನಡೆಸಿದರು.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - (1) ಪ್ರಜಾವಾಣಿ ಪ್ರಕಟಣೆ (2) ಉದಯವಾಣಿ ಪ್ರಕಟಣೆ

24-06-2015 - ಶಿವಮೊಗ್ಗ - ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ, ಕೃಷಿ ಇಲಾಖೆ ಹಾಗೂ ಕೃಷಿ ಬೆಲೆ ಆಯೋಗ ಸಹಯೋಗದಲ್ಲಿ ವಿವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆಶ್ರಯದ ಭತ್ತದ ಕೃಷಿ ಕುರಿತ ಕಾರ್ಯಾಗಾರ ಉದ್ಘಾಟಣೆ.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - (1) ವಿಜಯ ಕರ್ನಾಟಕ ಪ್ರಕಟಣೆ (2) New Indian Express

04 and 05-06-2015 - ಧಾರವಾಡ ಮತ್ತು ಬೆಳಗಾಂ- ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಡನೆ ಭೇಟಿ - ಬೆಲೆ ವೆಚ್ಚ ಕಂಡು ಹಿಡಿಯುವ ಬಗ್ಗೆ.

21 and 22-05-2015 - ಹೈದರಾಬಾದ್ - ಕೃಷಿ ಸಂಬಂಧಿ ಕಾರ್ಯಾಗಾರ

19 and 20-05-2015 - ದಾವಣಗೆರೆ - ಭತ್ತದ ಬೆಲೆ ಕುಸಿತದ ವಿಚಾರ.

30-04-2015 to 04-05-2015 - ಮಡಿಕೇರಿ, ಮಂಗಳೂರು, ಹಾಸನ - ಜಿಲ್ಲೆಯ ಕೃಷಿ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಮಾರುಕಟ್ಟೆ, ಬೆಲೆ, ಖರೀದಿ, ಇತ್ಯಾದಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚೆ. ಮಳೆ ಆಶ್ರಯದ ಭತ್ತದ ಬೇಸಾಯದ ಸಾಧಕ ಬಾಧಕಗಳ ಬಗ್ಗೆ ರೈತರು, ಅಧಿಕಾರಿಗಳು, ತಜ್ಞರು, ಮತ್ತಿತರರೊಡನೆ ಚರ್ಚೆ.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ - (1) ವಿಜಯ ಕರ್ನಾಟಕ - 02-05-2015 ಪ್ರಕಟಣೆ (2) ವಿಜಯ ಕರ್ನಾಟಕ ಪ್ರಕಟಣೆ - 03-05-2015

12-04-2015 to 15-04-2015 - ಚಿಕ್ಕಮಗಳೂರು - ಜಿಲ್ಲೆಯ ಕೃಷಿ ಮತ್ತು ತೋಟದ ಬೆಳೆಗಳ ಖರೀದಿ ಮತ್ತು ಬೆಲೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರಿಗಳೊಡನೆ ಚರ್ಚೆ.

04/2015 - ಕೊಪ್ಪ - ಮಳೆಯಾಶ್ರಿತ ಭತ್ತದ ಕೃಷಿ ಸಮಸ್ಯೆ ಬಗ್ಗೆ ರೈತರು, ವಿಜ್ಞಾನಿಗಳು ಮತ್ತು ಅಧಿಕಾರಿಗಳೊಡನೆ ಚರ್ಚೆ.

27-02-2015 to 02-03-2015 - ಉಡುಪಿ - ಜಿಲ್ಲೆಯ ತಾಳೆ, ಅಡಿಕೆ ಇತರೆ ತೋಟಗಾರಿಕೆ ಬೆಳೆಗಳ ಉತ್ಪಾದನೆ, ಮಾರಟ, ಖರೀದಿ ವ್ಯವಸ್ಥೆ ಬಗ್ಗೆ ಚರ್ಚೆ

24 & 25-02-2015 - ಶಿವಮೊಗ್ಗ - ಕೃಷಿ ಮತ್ತು ತೋಟಗಾರಿಕೆ ಬೆಲೆಗಳ ಉತ್ಪಾದನೆ, ಮಾರಾಟ, ಖರೀದಿ ಬಗ್ಗೆ ಅಧಿಕಾರಿಗಳೊಡನೆ ಚರ್ಚೆ, ತಾಲ್ಲೂಕಿನ ತಾಳೆ ಬೆಳೆ ಬಗ್ಗೆ ತೋಟಗಾರಿಕೆ ಅಧಿಕಾರಿಗಳು, ರೈತರೊಡನೆ ಹಾಗೂ ಮಾಧ್ಯಮ ಪ್ರತಿನಿಧಿಗಳೊಡನೆ ಸಂವಾದ.

19 & 21-02-2015 - ಗುಲ್ಬರ್ಗ - ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಉತ್ಪಾದನೆ, ಮಾರುಕಟ್ಟೆ, ಖರೀದಿ ವ್ಯವಸ್ಥೆಯ ಬಗ್ಗೆ ಹಾಗೂ ತೊಗರಿ ಮಂಡಳಿ ಸದೃಢಗೊಳಿಸುವ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಡನೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ.

27 & 29-01-2015 - ಬೀದರ್ - ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಂದು ರೈತ ಕುಟುಂಬದವರೊಂದಿಗೆ ಕೃಷಿ, ತೋಟಗಾರಿಕೆ, ಮಾರುಕಟ್ಟೆ ಅಧಿಕಾರಿಗಳ ಜೊತೆಗೂಡಿ ಭೇಟಿ ಮತ್ತು ಚರ್ಚೆ. ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ, ಉತ್ಪಾದನೆ ಬಗ್ಗೆ ಮತ್ತು ಬೆಲೆ ಮಾರುಕಟ್ಟೆ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ಮತ್ತು ಪತ್ರಿಕಾ ಗೋಷ್ಠಿ.

25 & 27-12-2014 - ಹಾವೇರಿ, ಸಿಂಧನೂರು, ರಾಯಾಚೂರು, ಶಿಗಾವಿ - ಶಿಗಾವಿ ಜನಪದ ವಿಶ್ವ ವಿದ್ಯಾನಿಲಯದಲ್ಲಿ ಆಡಳಿತ ಮಂಡಳಿ ಸಭೆ ಹಾಗೂ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ವಿಚಾರವಾಗಿ ಚರ್ಚೆ ಮತ್ತು ಭತ್ತದ ಮಾರುಕತಟ್ಟೆ ಮತ್ತು ರಫ್ತಿನ ಕಾರ್ಯಗಾರದಲ್ಲಿ ಭಾಗವಹಿಸುವುದು.

07-11-2014 - ಕೋಲಾರ, ಶಿಡ್ಲಗಟ್ಟ - ಟೊಮೆಟೊ ಬೆಲೆ ಕುಸಿತದ ವಿಚಾರವಾಗಿ ಜಿಲ್ಲಾ ತೋಟಗಾರಿಕೆ/ಕೃಷಿ/ಮಾರುಕಟ್ಟೆ ಇಲಾಖಾ ಅಧಿಕಾರಿಗಳು, ತೋಟಗಾರಿಕೆ ವಿಜ್ಞಾನಿಗಳು ಹಾಗೂ ಮಾರಾಟಗಾರರೊಂದಿಗೆ ಚರ್ಚೆ.

27 & 29-10-2014 - ಬೆಳಗಾವಿ - ಕೃಷಿ, ತೋಟಗಾರಿಕೆ ಮತ್ತು ಮಾರುಕಟ್ಟೆ ಇಲಾಖೆಯ ಅಧಿಕಾರಿಗಳ ಜೊತೆಗೆ ಜಿಲ್ಲಾ ಉತ್ಪಾದನೆ ಮತ್ತು ಮಾರುಕಟ್ಟೆ ವಿಚಾರಗಳ ಬಗ್ಗೆ ಚರ್ಚೆ ಹಾಗೂ ಕೋರ್ಲಘಾಟ್ ಪ್ರದೇಶದಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ವಿಚಾರವಾಗಿ ಕಾರ್ಯಗಾರದಲ್ಲಿ ಭಾಗವಹಿಸುವುದು.

16 & 18-10-2014 - ಶಿವಮೊಗ್ಗ - ಭತ್ತ ಮತ್ತು ಅಡಿಕೆ ಬೆಳೆಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವುದು. ಯುಜಿಸಿ ಸಭೆಯಲ್ಲಿ ಭಾಗವಹಿಸುವುದು.

12 & 13-10-2014 - ಚಿತ್ರದುರ್ಗ - ಪ್ರಾತ್ಯಕ್ಷಿಕೆ ರಾಗಿ ಹೊಲಗಳಿಗೆ ಬೇಟಿ, ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಅಧಿಕಾರಿಗಳೊಡನೆ ಚರ್ಚೆ ಮತ್ತು ಈಚಲಘಟ್ಟದಲ್ಲಿ ತೃಣದಾನ್ಯಗಳ ಬಗ್ಗೆ ರೈತರೊಡನೆ ಸಭೆ.

30-09-2014 & 01-10-2014 - ಚಿತ್ರದುರ್ಗ - ಚಿತ್ರದುರ್ಗ ಮುರುಘಾ ಮಠದ ವತಿಯಿಂದ ಶ್ರೀಮಠದ ಆವರಣದಲ್ಲಿ ನಡೆಯುವ ಕೃಷಿ ಹಾಗೂ ಕೈಗಾರಿಕಾ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದು.

25 & 28-09-2014 -ಶಿವಮೊಗ್ಗ, ಚನ್ನಗಿರಿ - ಅಡಿಕೆ ಮಾರುಕಟ್ಟೆ ಸ್ಥಿರೀಕರಣ ಸಭೆಯಲ್ಲಿ ಭಾಗವಹಿಸುವುದು, ಅಡಿಕೆ ಮಾರುಕಟ್ಟೆ ಮೇಲೆ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವುದು. ಸಹಕಾರ ಸಂಸ್ಥೆಗಳು ತೋಟಗಾರಿಕೆ/ಕೃಷಿ ಮಾರಾಟ ಇಲಾಖೆ ಅಧಿಕಾರಿಗಳೊಡನೆ ಚರ್ಚೆ.