!-- PAGE TITLE -->

ಕನಿಷ್ಠ ಬೆಂಬಲ ಬೆಲೆ - Minimum Support Price

Learn about Minimum Support Price

ಕನಿಷ್ಠ ಬೆಂಬಲ ಬೆಲೆ - MSP

ಕನಿಷ್ಠ ಬೆಂಬಲ ಬೆಲೆ ರೈತರು ಬೆಳೆಯುವ ಬೆಳೆಗಳ ತೀರ್ವತರ ಬೆಲೆ ಕುಸಿತದ ವಿರುದ್ಧ ಭಾರತ ಸರಕಾರದ ಒಂದು ಮಾರುಕಟ್ಟೆ ಮಧ್ಯ ಪ್ರವೇಶ ವ್ಯವಸ್ಥೆಯಾಗಿದೆ. ಕೇಂದ್ರ ಸರಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು ಮಾಡುವ ಶಿಫಾರಸಿನ ಅನ್ವಯ, ಭಾರತ ಸರಕಾರವು ಕೆಲವು ಬೆಳೆಗಳ ಬಿತ್ತನೆಗೆ ಮೊದಲು ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಕನಿಷ್ಠ ಬೆಂಬಲ ಬೆಲೆಯನ್ನು ಹಲವಾರು ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದುವು - ಉತ್ಪಾದನಾ ವೆಚ್ಚ, ಪರಿಕರಗಳ ಬೆಲೆಗಳಲ್ಲಿನ ಬದಲಾವಣೆಗಳು, ಅಂತರ ರಾಷ್ಟ್ರೀಯ ಬೆಲೆ ಪರಿಸ್ಥಿತಿ, ರೈತರು ನೀಡಿದ ಮತ್ತು ಪಡೆದ ಬೆಲೆಗಳಲ್ಲಿನ ಸಮಾನತೆ, ಹೂಡುವಳಿ-ಹುಟ್ಟುವಳಿ ಸಮಾನತೆ, ಮಾರುಕಟ್ಟೆ ಬೆಲೆಗಳ ಪ್ರವೃತ್ತಿ ಮತ್ತಿತರ ಅಂಶಗಳು.

ಜೊತೆಗೆ, ಪೂರೈಕೆ ಸಂಬಂಧಿತ ಮಾಹಿತಿಯಾದ ಕ್ಷೇತ್ರ, ಇಳುವರಿ, ಉತ್ಪಾದನೆ, ರಫ್ತು, ಆಮದು, ದೇಶೀಯ ಲಭ್ಯತೆ, ಸರ್ಕಾರಿ / ಸಾರ್ವಜನಿಕ ಸಂಸ್ಥೆಗಳು ಅಥವಾ ಉದ್ದಿಮೆಗಳಲ್ಲಿನ ಸರಕು ಅಲ್ಲದೆ ಬೇಡಿಕೆ ಸಂಬಂಧಿತ ಮಾಹಿತಿಯಾದ ತಲಾ ಸರಾಸರಿ ಬಳಕೆ, ಪ್ರವೃತ್ತಿ ಮತ್ತು ಸಂಸ್ಕರಣಾ ಘಟಕಗಳ ಸಾಮರ್ಥ್ಯ, ಕೃಷಿ ಉತ್ಪನ್ನಗಳ ಸಂಸ್ಕರಣಾ ವೆಚ್ಚ ಮಾರಾಟ ವೆಚ್ಚ - ದಾಸ್ತಾನು, ಸಾಗಾಣಿಕೆ, ಸಂಸ್ಕರಣೆ, ಮಾರಾಟ ಸೇವೆಗಳು, ತೆರಿಗೆ / ಕರಗಳು ಮತ್ತಿತರ ಅಂಶಗಳನ್ನು ಇದು ಪರಿಗಣಿಸುತ್ತದೆ.


CACP ಶಿಫಾರಿಸಿರುವ ಮತ್ತು ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಳು - Minimum Support Price Recommended by CACP and Fixed by Government