!-- PAGE TITLE -->

ಕರ್ತವ್ಯಗಳು - Duties

Learn about the duties of the commission

ಕರ್ತವ್ಯಗಳು - Duties

ನಿಯಮಿತವಾಗಿ ಮತ್ತು ವ್ಯವಸ್ಥಿತವಾಗಿ ಸ್ಥಳೀಯ ಬೇಡಿಕೆ, ಪರಿಕರಗಳ ಸರಬರಾಜು, ಹುಟ್ಟುವಳಿ ಪ್ರತಿಬಿಂಬಿಸುವ ಪ್ರಾಮಾಣಿತ ಬೆಲೆ ಪರಿಕಲ್ಪನೆಗಳನ್ನು ಬಳಸಿಕೊಂಡು ತೋಟಗಾರಿಕಾ ಬೆಳೆಗಳು ಸೇರಿದಂತೆ ರಾಜ್ಯದ ಪ್ರಮುಖ ಕೃಷಿ ಬೆಳೆಗಳ ಸಾಗುವಳಿ ವೆಚ್ಚ ಅಂದಾಜಿಸುವುದು.

ನಿಯತಕಾಲಿಕವಾಗಿ ರಾಜ್ಯ ಸರ್ಕಾರದಿಂದ ಮಧ್ಯಸ್ಥಿಕೆ ವಹಿಸಬೇಕಾಗಿರುವ ಬೆಳೆಗಳನ್ನು ಗುರುತಿಸುವುದು. ಪ್ರಾರಂಭಿಕವಾಗಿ ರಾಗಿ, ಜೋಳ, ಸಜ್ಜೆ, ಕಿರುಧಾನ್ಯಗಳು, ತೊಗರಿ, ನೆಲಗಡಲೆ, ಆಲೂಗಡ್ಡೆ, ಟೊಮೆಟೊ ಮತ್ತು ಈರುಳ್ಳಿ ಬೆಳೆಗಳನ್ನು ಪರಿಗಣಿಸುವುದು. ಇತರೆ ಬೆಳೆಗಳನ್ನು ಸೇರ್ಪಡೆ ಮಾಡುವುದರ ಬಗ್ಗೆ ಸಮಿತಿಯು ಕಾಲಕಾಲಕ್ಕೆ ಸರ್ಕಾರವು ಗುರುತಿಸಿ ಸೂಚಿಸಿದಂತೆ ಕ್ರಮ ಕೈಗೊಳ್ಳುವುದು.

ಕೃಷಿ ಉತ್ಪನ್ನಗಳಿಗೆ ಸಂಭವನೀಯ ಬೆಲೆ ನೀಡಲು, ಬೆಲೆಗಳ ಉತ್ಪಾದಕತೆ, ಉತ್ಪಾದನೆ, ಆವರಿಸಿದ ವಿಸ್ತೀರ್ಣ ಮತ್ತು ಮುಂಗಡ ಬೆಲೆ, ಸರಬರಾಜು ಮತ್ತು ಬೇಡಿಕೆ ಬಗ್ಗೆ ವಿಶ್ಲೇಷಣೆ ಮಾಡುವುದು.
ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ ...

Click here for English Version