ಕನ್ನಡ ಷರತ್ತು ಮತ್ತು ನಿಬಂಧನೆಗಳು

1. ಬೆಳೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಕರ್ತವ್ಯಗಳು, ಅಲ್ಪಾವಧಿ ಹಾಗೂ ದೀರ್ಘಾವಧಿಯ ಕೃಷಿ ಪರಿಸರ ಸ್ಥಿತಿಗಳನ್ವಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಮತೋಲನಾ ಮತ್ತು ಸಮಗ್ರ ರೀತಿಯಲ್ಲಿ ಲಾಭದಾಯಕ ಬೆಲೆಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.

2. ಸುವ್ಯವಸ್ಥಿತ, ಸಮರ್ಥ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆ ವ್ಯವಸ್ಥೆ, ಒಕ್ಕಣೆ ಕಣ, ದಾಸ್ತಾನು ಮಳಿಗೆಗಳು, ಸಾರಿಗೆ, ಪೂರೈಕೆ ಸರಪಳಿ (Supply chain), ಸಂಸ್ಕರಣೆ, ವರ್ಗೀಕರಣ (Grading) ಮತ್ತು ಪ್ಯಾಕೇಜಿಂಗ್ ಸೇರಿದಂತೆ, ಗ್ರಾಮೀಣ ಮೂಲ ಸೌಕರ್ಯ ಸೃಷ್ಟಿ ಮಾಡಲು ನೀತಿ/ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸರ್ಕಾರಕ್ಕೆ ನೆರವಾಗುವುದು.

3. ರೈತರು ಸಾಮೂಹಿಕವಾಗಿ ಲಾಭದ ಬೆಲೆ ಪಡೆದುಕೊಳ್ಳುವ ಶಕ್ತಿಯನ್ನು ವರ್ಧಿಸಲು ಮತ್ತು ಮಾರುಕಟ್ಟೆ ಬೆಲೆ ಸ್ಥಿರೀಕರಣ ನಿಧಿ, ಸಾಮೂಹಿಕ ಕ್ರಮಗಳ ಮೂಲಕ ಬೆಲೆಯಲ್ಲಿ ಸಂಭವನೀಯ ಹಾನಿಯನ್ನು ಕಡಿಮೆ ಮಾಡಲು ಸಲಹೆ ನೀಡುವುದು.

4. ಮಳೆ ಆಧಾರಿತ ಬೇಸಾಯ, ಪೌಷ್ಟಿಕತೆ, ಹವಾಮಾನ ಬದಲಾವಣೆ, ಸಂಪನ್ಮೂಲಗಳ ಸದ್ಬಳಕೆ, ಸಮರ್ಥನೀಯ ಬೆಲೆ ಮೂಲಕ ಸುಸ್ಥಿರ ಕೃಷಿ ಮತ್ತು ಆಹಾರ ಭದ್ರತೆಗಾಗಿ ಪರಿಣಾಮಕಾರಿಯಾದ ಕ್ರಮಗಳನ್ನು ರೂಪಿಸುವುದು.

5. ಉತ್ಪಾದನೆ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಪಟ್ಟ ಎಲ್ಲಾ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಮೂಲಕ ರೈತರು, ನೀತಿ ರೂಪಿಸುವವರು ಹಾಗೂ ಸಂಶೋಧಕರಿಗೆ ಸೂಕ್ತ ನಿರ್ಣಯ ಕೈಗೊಳ್ಳಲು ಅನುವು ಮಾಡಿಕೊಡುವು

6. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗಧಿಪಡಿಸಲು ಸರಿಯಾದ ವಿಧಾನ ರೂಪಿಸಲು ಮತ್ತು ವಿವಿಧ ಪಾಲುದಾರರೊಡನೆ ಸಮಾಲೋಚಿಸಿ ಪರಿಣಾಮಕಾರಿ ವೆಚ್ಚ ಮತ್ತು ದಕ್ಷ ಕ್ರಮಗಳನ್ನು ರೂಪಿಸುವುದು.

7. ಪ್ರಸ್ತುತ ಮಾರುಕಟ್ಟೆ ಸ್ಥಿತಿ ಪರಿಶೀಲಿಸಿ ಮಾರುಕಟ್ಟೆಯ ಮೂಲ ಸೌಕರ್ಯಗಳನ್ನು ಸುಧಾರಿಸಲು ಮತ್ತು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಪ್ರಸಕ್ತ ಇಳುವರಿ ಹಾಗೂ ಗರಿಷ್ಟ ಇಳುವರಿಯ ಅಂತರವನ್ನು ಕಡಿಮೆ ಮಾಡಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಲಹೆ ನೀಡುವುದು.

8. ಅಧಿಕ ಉತ್ಪಾದನೆ ಮತ್ತು ಮಾರುಕಟ್ಟೆಗೆ ಹೆಚ್ಚಿನ ಉತ್ಪನ್ನಗಳ ಪೂರೈಕೆ ತಡೆಗಟ್ಟಲು, ಸಂಪನ್ಮೂಲಗಳ ಸುಸ್ಥಿರ ಬಳಕೆ, ಸಾಮಾಜಿಕ, ಆರ್ಥಿಕ ಮತ್ತು ಬೇಸಾಯದ ಜೈವಿಕ ಅಂಶಗಳನ್ನು ಆಧಾರಿಸಿ ಕೃಷಿ ಹವಾಮಾನ ವಲಯಗಳಲ್ಲಿ ಪ್ರಾದೇಶಿಕ ಬೆಳೆ ಯೋಜನೆ ರೂಪಿಸುವ ಬಗ್ಗೆ ಸ್ಲಹೆ ನೀಡುವುದು.

9. ಮಾರುಕಟ್ಟೆಗೆ ಸಂಬಂಧಿಸಿದ ತೊಂದರೆಗಳು ಮತ್ತು ಕೃಷಿ ಉತ್ಪನ್ನಗಳ ದರಗಳ ಬಗ್ಗೆ ಆಯೋಗಕ್ಕೆ ಉಲ್ಲೇಖಿಸುವ ಅಂಶಗಳಿಗೆ ಕಾಲಕಾಲಕ್ಕೆ ಸರ್ಕಾರಕ್ಕೆ ಸಲಹೆ ನೀಡುವುದು.

10. ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಮತ್ತು ರಾಜ್ಯ ಸರ್ಕಾರದ ಮಧ್ಯ ಸಂಪರ್ಕ ಸೇತುವೆಯಾಗಿ, ರಾಜ್ಯದ ವಿವಿಧ ಇಲಾಖೆ/ಸಂಸ್ಥೆಗಳಲ್ಲಿ ಸಮನ್ವಯಗೊಳಿಸಿ ವಿವಿಧ ಇಲಾಖೆಗಳ ಉತ್ಪಾದನಾ ಕಾರ್ಯಕ್ರಮಗಳಲ್ಲಿ ಸಾಮರಸ್ಯ ಉಂಟು ಮಾಡಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಮಾರುಕಟ್ಟೆ ಬೆಲೆಯನ್ನು ರೈತರ ಕಲ್ಯಾಣಕ್ಕಾಗಿ ನಿಗಧಿಪಡಿಸುವುದು.